ಕೊರೋನಾ ಲಾಕ್ ಡೌನ್ ಸಮಯದಲ್ಲಿ ಅದೆಷ್ಟೋ ಕಾರ್ಮಿಕರು ತಮ್ಮ ಮನೆಗೆ ಹಿಂದಿರುಗಲಾಗದೆ ಪರದಾಟ ನಡೆಸುತ್ತಿದ್ದರು. ಇವರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮನೆ ತಲುಪಿಸಿದ್ದೇ ಈ ಸೋನು ಸೂದ್. ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಜೀವ ಉಳಿಸಿಕೊಳ್ಳಲು ಪರಿತಪಿಸುತ್ತಿದ್ದವರಿಗೆ ಸಹಾಯ ಹಸ್ತ ಚಾಚ್ಚಿದ್ದೇ ಈ ಸೋನು ಸೂದ್. ಹೌದು, ನಟ ಸೋನು ಸೂದ್, ತನ್ನ ಪರೋಪಕಾರಿ ಕೆಲಸದಿಂದಲೇ ಹೆಸರು ಗಳಿಸಿದವರು. ಸಿನಿಮಾದಲ್ಲಿ ಹೆಚ್ಚಾಗಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು ಸೂದ್, ನಿಜ ಜೀವನದಲ್ಲಿ ರಿಯಲ್ ಹೀರೋ ಆದ್ರು. ಕರೋನಾ ಬಂದಾಗಿನಿಂದಲೂ ಸೋನು ಸೂದ್ ಈ ರೀತಿಯ ಒಳ್ಳೆ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದಾರೆ. ನಟ ಸೋನು ಸೂದ್ ಇದೀಗ ಮತ್ತೊಂದು ಒಳ್ಳೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಸೋನು ಸೂದ್ ತಮ್ಮ ನಟನೆ ಹಾಗೂ ತಮ್ಮ ಪರೋಪಕಾರಿ ಕೆಲಸಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಮಾದಕ ಲೋಕದ ವಿರುದ್ಧ ಯುದ್ಧಕ್ಕೆ ನಿಂತಿದ್ದಾರೆ ಸೋನು ಸೂದ್. ಮಾದಕ ವ್ಯಸನವನ್ನು ಎದುರಿಸಲು “ದೇಶ್ ಕೆ ಲಿಯೆ” ಅಭಿಯಾನವನ್ನ ಪ್ರಾರಂಭಿಸಿದ್ದಾರೆ. ಮಾದಕ ಮುಕ್ತ ಭಾರತಕ್ಕೆ ಸೋನು ಸೂದ್ ಪಣತೊಟ್ಟಿದ್ದಾರೆ. ಡ್ರಗ್ಸ್ ನಿಂದ ಹಾಳಾಗುತ್ತಿರುವ ಯುವಪೀಳಿಗೆಯನ್ನು ಸರಿ ದಾರಿಗೆ ತರಲು ಸೋನು ಸೂದ್ ಮುಂದಾಗಿದ್ದಾರೆ. ಮಾದಕ ವಸ್ತುಗಳಿಂದ ಜೀವಕ್ಕೆ ಅಪಾಯ ಎಂಬುದನ್ನು ತಿಳಿಸಲು ಸೋನು ಸೂದ್ ಮುಂದಾಗಿದ್ದಾರೆ.
****