ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಟಿ ಸವಿ ಮಾದಪ್ಪ ಅವರ ಅಂತ್ಯಕ್ರಿಯೆ ಸುಂಟಿಕೊಪ್ಪಾದ ಅಂದಗೋವೆ ಗ್ರಾಮದಲ್ಲಿ ನರವೇರಿದೆ, ಈ ವೇಳೆ ಅಭಿಮಾನಿ ಮತ್ತು ಕುಟುಂಬಸ್ಥರು ಅಪಾರ ದುಖದಲ್ಲಿ ಮುಳುಗಿದ್ದರು.
ಅಂತ್ಯಕ್ರಿಯೆ ವೇಳೆ ಮದುವೆಶಾಸ್ತ್ರ
ಸ್ವಗ್ರಾಮ ಅಂದಗೋವೆಯಲ್ಲಿ ಅಂತಿಮ ವಿಧಿವಿಧಾನ ನಡೆದಿದೆ. ಸವಿಗೆ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಸಂಪ್ರದಾಯದ ಪ್ರಕಾರ ಸವಿಗೆ ಮದುವೆ ಶಾಸ್ತ್ರ ಮಾಡಲಾಗಿದೆ. ಬಾಳೆಯ ದಿಂಡನ್ನು ಮಧುಮಗನಂತೆ ಅಲಂಕರಿಸಲಾಗಿತ್ತು. ಸವಿ ಪಾರ್ಥಿವ ಶರೀರಕ್ಕೂ ವಧುವಿನಂತೆ ಶೃಂಗಾರ ಮಾಡಲಾಗಿತ್ತು. ನಂತರ ಮಗಳ ಪಾರ್ಥಿವ ಶರೀರಕ್ಕೆ ತಾಯಿ ತಾಳಿ ಕಟ್ಟಿದ್ದಾರೆ. ಸವಿ ಮಾದಪ್ಪ ಆತ್ಮಕ್ಕೆ ಮೋಕ್ಷ ಸಿಗಲು ವಿವಾಹ ಶಾಸ್ತ್ರ ನೆರವೇರಿಸಲಾಗಿದೆ. ವಿವಾಹ ಶಾಸ್ತ್ರದ ಸಂದರ್ಭದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.