5 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಶಿವಾಜಿ ಗಣೇಶನ್ ಅವರ ಸಾಧನೆ ದೊಡ್ಡದು. 288 ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು (ಅ.1) ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ.
ಭಾರತೀಯ ಚಿತ್ರರಂಗದಲ್ಲಿ ದಿಗ್ಗಜ ನಟನಾಗಿ ಮೆರೆದವರು ಶಿವಾಜಿ ಗಣೇಶನ್. ಇಂದು (ಅ.1) ಅವರ ಜನ್ಮದಿನ. 93ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. ಆನ್ಲೈನ್ ಸರ್ಚ್ ಇಂಜಿನ್ ಗೂಗಲ್ ಕೂಡ ಶಿವಾಜಿ ಗಣೇಶನ್ ಅವರಿಗೆ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಗೂಗಲ್ ಮುಖಪುಟದಲ್ಲಿನ ಲೋಗೋವನ್ನು ವಿಶೇಷ ರೀತಿಯಲ್ಲಿ ಬದಲಾಯಿಸುವ ಮೂಲಕ ಈ ರೀತಿಯ ಡೂಡಲ್ ಮಾಡಲಾಗುತ್ತದೆ. ಇಂಥ ಗೌರವ ಸಿಗುವುದು ಕೆಲವೇ ಮಂದಿಗೆ ಮಾತ್ರ. ಇಂದು ಶಿವಾಜಿ ಗಣೇಶನ್ ಅವರ 93ನೇ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ಮೂಲಕ ಅವರ ಸಾಧನೆಯನ್ನು ಸ್ಮರಿಸಲಾಗಿದೆ.

****