‘ಬ್ರಹ್ಮಚಾರಿ’ ಸಿನಿಮಾದಲ್ಲಿ ಅಭಿನಯಿಸಿ ಸಿನಿ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದ್ದ ಸತೀಶ್ ಮತ್ತು ಅದಿತಿ ಪ್ರಭುದೇವ್ ಜೋಡಿ ಈಗ ಮತ್ತೊಂದು ಚಿತ್ರದಲ್ಲಿ ಜೊತೆಯಾಗುತ್ತಿದ್ದಾರೆ. ಹೌದು ‘ಮ್ಯಾಟ್ನಿ’ ಎಂಬ ಕಾಮಿಡಿ ಥ್ರಿಲ್ಲರ್ ಜಾನರ್ ಚಿತ್ರದಲ್ಲಿ ಮತ್ತೊಮೆ ಈ ಜೋಡಿ ಒಂದಾಗಿದೆ.
ಮ್ಯಾಟ್ನಿ ಚಿತ್ರದಲ್ಲಿ ರಚಿತಾ ರಾಮ್ ಕೂಡ ಅಭಿನಯಿಸಿದ್ದು ಇಬ್ಬರಲ್ಲಿ ಯಾರು ಮೇನ್ ರೋಲ್ ಮಾಡಲಿದ್ದಾರೆ ಎಂದು ಕುತೂಹಲ ಮೂಡಿದೆ. ಈ ಬಗ್ಗೆ ನಿರ್ದೇಶಕ ಮನೋಹರ್ ಕಾಂಪಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ರಚಿತಾ ರಾಮ್ ಮತ್ತು ಅದಿತಿ ಇಬ್ಬರ ಪಾತ್ರಗಳೂ ಕಥೆಗೆ ಮುಖ್ಯ. ಇದರಲ್ಲಿ ಸೆಕೆಂಡ್ ಹೀರೋಯಿನ್, ಫಸ್ಟ್ ಹೀರೋಯಿನ್ ಎಂಬುದಿಲ್ಲ. ಅದಿತಿಯದು ಮೇಜರ್ ಕ್ಯಾರೆಕ್ಟರ್, ರಚಿತಾರದು ಕಥೆಗೆ ಇಂಪಾರ್ಟೆಂಟ್ ಕ್ಯಾರೆಕ್ಟರ್. ಅದಿತಿ ಅವರದ್ದು ಸಿಕ್ಕಾಪಟ್ಟೆ ಬಬ್ಲಿ ಬಬ್ಲಿಯಾಗಿರುವ ಮೆಡಿಕಲ್ ಸ್ಟೂಡೆಂಟ್ ಪಾತ್ರ ಇರಲಿದೆಯಂತೆ.
ಚಿತ್ರಕ್ಕೆ ಸಂಗೀತ ಸಂಯೋಜನೆ ಪೂರ್ಣಚಂದ್ರ ತೆಜಸ್ವಿ, ಛಾಯಾಗ್ರಹಣ ಸುಧಾಕರ್ ಮಾಡುತ್ತಿದ್ದು, ಪಾರ್ವತಿಯವರು ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ನಿರ್ದೇಶನ ಮನೋಹರ್ ಕಾಂಪಲ್ಲಿ.
****