21.8 C
Bengaluru
Friday, March 24, 2023
spot_img

ನಾನು ಭಿಕ್ಷುಕಿ, ನಾನೀಗ ಅನಾಥೆ, ನನಗೆ ಯಾರಿಲ್ಲ.., ನಟಿ ವಿಜಯಲಕ್ಷ್ಮಿ..!

ತಾಯಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ನಟಿ ವಿಜಯಲಕ್ಷ್ಮಿ ಅವರಿಗೆ ನಿರ್ಮಾಪಕರಾದ ಬಾ.ಮ.ಹರೀಶ್ ಅರ್ಜುನ್ ಗೌಡ ಮತ್ತು ಹುಚ್ಚಾ ವೆಂಕಟ್ ಸಹಾಯ ಮಾಡಿದ್ದರು. ಜೊತೆಗೆ ಜನಸ್ನೀಹಿ ಚಾರಿಟಬಲ್ ಟ್ರಸ್ಟ್ ಕೂಡ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಲು ಸಹಾಯ ಮಾಡಿದ್ದರು,

ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಮಾಡಿದಂತಹ ವೀಡಿಯೋಗಳ ಮೂಲಕ ಸಾಕಷ್ಟು ಕಾಂಟ್ರವರ್ಸಿಗೆ ಕಾರಣವಾಗಿ ಸುದ್ದಿಯಲ್ಲಿದ್ದ ನಟಿ ವಿಜಯಲಕ್ಷ್ಮಿ ಅವರ ಅಕ್ಕ ಉಷಾ ಅವರ ಅನಾರೋಗ್ಯ ಕಾರಣಕ್ಕೆ ಸಿನಿಮಾರಂಗದ ಕಲಾವಿದರ ಸಹಾಯವನ್ನು ಬೇಡಿಕೊಂಡಿದ್ದರು. ಸ್ವತಃ ವಿಜಯಲಕ್ಷ್ಮಿ ಕೂಡ ಕೋವಿಡ್ ಗೆ ಒಳಗಾಗಿದ್ದರು ನಂತರ ಚೇತರಿಸಿಕೊಳ್ಳುವಷ್ಟರಲ್ಲಿ ತಾಯಿಯನ್ನು ಕಳೆದುಕೊಂಡು ಅಕ್ಷರಶಃ ಅನಾಥರಾಗಿದ್ದರು

ಈಗ ಸುದ್ದಿಗೋಷ್ಠಿ ಕರೆದು ಮಾತನಾಡಿರುವ ವಿಜಯಲಕ್ಷ್ಮಿ, ‘ನಂಗೆ ಯಾರೂ ಇಲ್ಲ. ನಾನೀಗ ಅನಾಥೆ. ನನಗೆ ಚಿತ್ರರಂಗವೇ ಕುಟುಂಬ. ನನ್ನ ಅಮ್ಮ ಸತ್ತ ನಂತರ ಪ್ರೇಮಕ್ಕನಿಗೆ ಕರೆ ಮಾಡಿ ಹೇಳಿದೆ. ಅವರು ಬಾ.ಮಾ. ಹರೀಶ್​ ನಂಬರ್ ಕೊಟ್ರು. ಕರೆ ಮಾಡಿದ ತಕ್ಷಣ ಹರೀಶಣ್ಣ ಸಹಾಯಕ್ಕೆ ಬಂದ್ರು. ನಾನು ಆಗ ಹೆಣದ ಮುಂದೆ ಕೂತು ಅಳ್ತಾ ಇದ್ದೆ. ಅಮ್ಮನ ಶವವನ್ನು ಸುಟ್ಟು, ಶ್ರೀರಂಗಪಟ್ಟಣದಲ್ಲಿ ಬೂದಿ ಬಿಟ್ಟು ಬಂದಿದ್ದೇವೆ. ಇದೆಲ್ಲದಕ್ಕೂ ಬಾ.ಮಾ. ಹರೀಶ್​ ಸಹಾಯ ಮಾಡಿದ್ದಾರೆ. ಶಿವಣ್ಣ, ಪುನಿತ್ ರಾಜಕುಮಾರ್, ಶ್ರುತಿ, ಸುಧಾರಾಣಿ, ಹುಚ್ಚಾ ವೆಂಕಟ್ ಎಲ್ಲರೂ ನನ್ನ ಜೊತೆ ಮಾತನಾಡಿದ್ದಾರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಧನ್ಯವಾದ’ ಎಂದರು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles