ಸ್ಯಾಂಡಲ್ವುಡ್ ನಟ ನೀನಾಸಂ ಸತೀಶ್ ಅವರ ತಾಯಿ ಚಿಕ್ಕತಾಯಮ್ಮ ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 80 ವರ್ಷ ವಯಸ್ಸಾಗಿತ್ತು. ಆರ್.ಆರ್.ನಗರದಲ್ಲಿರುವ ನಿವಾಸದಲ್ಲಿ ಇಂದು ಮುಂಜಾನೆ ಅವರು ನಿಧನ ಹೊಂದಿದ್ದಾರೆ.ಆರ್ ಆರ್ ನಗರದಲ್ಲಿರೋ ನಿವಾಸದಲ್ಲಿ ಮಗ ಸತೀಶ್ ನೀನಾಸಂ ಅವರೊಂದಿಗೆ ವಾಸವಿದ್ದರು. ಚಿಕ್ಕತಾಯಮ್ಮ ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ.
ಸುಮಾರು ಒಂದು ವರ್ಷದಿಂದ ಚಿಕ್ಕತಾಯಮ್ಮ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸತೀಶ್ ಮತ್ತು ಅವರ ಪತ್ನಿ ಇಬ್ಬರು ಚಿಕ್ಕತಾಯಮ್ಮ ಅವರ ಆರೈಕೆ ಮಾಡುತ್ತಿದ್ದರು. ಚಿಕ್ಕತಾಯಮ್ಮ ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ. ಹೀಗಾಗಿಯೇ ಪಾಥೀರ್ವ ಶರೀರವನ್ನು ಇಂದೇ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎನ್ನಲಾಗಿದೆ. 85 ವರ್ಷದ ಚಿಕ್ಕತಾಯಮ್ಮ ಅವರಿಗೆ ಒಟ್ಟು ಎಂಟು ಮಂದಿ ಮಕ್ಕಳು. ಅವರಲ್ಲಿ ನಾಲ್ಕು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳು.
ಸತೀಶ್ ನೀನಾಸಂ ಅವರು ಗೆಳೆಯ ಸಂಚಾರಿ ವಿಜಯ್ ಅವರ ಅಕಾಲಿಕೆ ಮರಣದ ನೋವಿನಿಂದ ಹೊರ ಬರುವ ಮುನ್ನವೇ ತಾಯಿಯೂ ಅವರನ್ನು ಅಗಲಿರುವುದು ಅವರ ನೋವನ್ನು ಹೆಚ್ಚಿಸಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಸತೀಶ್ ನೀನಾಸಂ ಅವರು ತಾಯಿ ಹಾಗೂ ಮನೆಗೆ ಸದಾ ಸಮಯ ಕೊಡುತ್ತಿದ್ದರು. ಚಿಕ್ಕತಾಯಮ್ಮ ಅವರ ನಿಧನಕ್ಕೆ ಸೆಲೆಬ್ರಿಟಿಗಳು ಹಾಗೂ ಸತೀಶ್ ನೀನಾಸಂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

****