ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಕಬ್ಜಾ’ ಚಿತ್ರದ 5ನೇ ಹಂತದ ಚಿತ್ರೀಕರಣ ಅಕ್ಟೋಬರ್ 4 ರಿಂದ ಪ್ರಾರಂಭವಾಗಲಿದೆ. ಕಬ್ಜಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಈ ಶಡ್ಯೂಲ್ ನ ಚಿತ್ರೀಕರಣದಲ್ಲಿ ಬಾಲಿವುಡ್ ನ ನವಾಬ್ ಶಾ ಪಾಲ್ಗೊಳ್ಳುತ್ತಿದ್ದಾರೆ.
ಮಿನರ್ವ ಮಿಲ್ ನಲ್ಲಿ ಸಿದ್ದವಾಗಿದೆ ಅದ್ದೂರಿ ಸೆಟ್.
5ನೇ ಹಂತದ ಚಿತ್ರೀಕರಣಕ್ಕಾಗಿ ಕೆ.ಜಿ.ಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರ ನೇತೃತ್ವದಲ್ಲಿ ಸುಮಾರು ಒಂದು ತಿಂಗಳಿನಿಂದ ಮಿನರ್ವ ಮಿಲ್ ನಲ್ಲಿ ಅದ್ದೂರಿಯಾಗಿ ಸೆಟ್ ನಿರ್ಮಾಣ ಮಾಡಲಾಗಿದೆ. ಇದೇ ಸೆಟ್ ನಲ್ಲಿ ಸುಮಾರು 42 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕೊನೆಯ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ. ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರು ಅಭಿನಯಿಸುತ್ತಿರುವುದು ಅಭಿಮಾನಿಗಳ ಕಾತುರವನ್ನು ಇನ್ನಷ್ಟು ಹೆಚ್ಚಿಸಿದೆ. ಸೆಪ್ಟಂಬರ್ 18 ರಂದು ರಿಯಲ್ ಸ್ಟಾರ್ ಉಪ್ಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಟೀಸರ್ ಲಾಂಚ್ ಅನ್ನು ಗಿಪ್ಟ್ ಆಗಿ ನೀಡಿದ್ದರು ನಿರ್ದೇಶಕ ಆರ್ ಚಂದ್ರು.
****