ನಟ ಜಗ್ಗೇಶ್ ಈ ಹಿಂದೆ ತಮ್ಮ ಪುತ್ರ ಗುರುರಾಜ್‌ಗಾಗಿ ‘ಗುರು’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಈಗ ಅವರ ಪುತ್ರ ಗುರು, ಜಗ್ಗೇಶ್ ಅವರಿಗಾಗಿ ಒಂದು ಕಥೆ ರೆಡಿ ಮಾಡಿದ್ದು, ಆ ಸಿನಿಮಾವನ್ನು ಸ್ವತಃ ಜಗ್ಗೇಶ್ ಪುತ್ರ ಗುರುರಾಜ್ ನಿರ್ದೇಶಿಸಲಿದ್ದಾರಂತೆ. ಈ ವಿಚಾರವನ್ನು ಜಗ್ಗೇಶ್ ಅವರೇ ಹೇಳಿಕೊಂಡಿದ್ದಾರೆ.
“ನನ್ನ ಮಗ ಗುರು ಒಂದು ಅದ್ಭುತವಾದ ಸ್ಕ್ರಿಪ್ಟ್ ರೆಡಿಮಾಡಿಕೊಂಡಿದ್ದಾನೆ. ತುಂಬಾ ಚೆನ್ನಾಗಿದೆ. ನನ್ನ ಕೆರಿಯರ್‌ನ ಒಂದು ವಿಭಿನ್ನವಾದ ಸಿನಿಮಾ ಇದಾಗಲಿದೆ. ಸ್ವತಃ ಗುರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾನೆ. ಆರಾಮವಾಗಿ ಮಾಡು, ನಿನ್ನ ಅಪ್ಪನೇ ನಿನ್ನ ಕೈಯಲ್ಲಿದ್ದಾನೆ. ನೀಟಾಗಿ ಪ್ಲಾನ್ ಮಾಡಿಕೋ ಎಂದು ಹೇಳಿದ್ದೇನೆ’ ಎಂದು ತಮ್ಮ ಮಗನ ಸಿನಿಮಾ ಕನಸಿನ ಬಗ್ಗೆ ಹೇಳಿದರು.
ಕಾಗೆ ಮೊಟ್ಟೆ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ಗುರುರಾಜ್ ಜಗ್ಗೇಶ್ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಹೊಂದಿದ್ದಾರೆ. ಇದರ ಜೊತೆಗೆ ಅವರ ಮುಂದಿನ ಯೋಜನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ,
****