ಸಲಗ.. ಸಲಗ.. ಸಲಗ.. ಎಲ್ಲಿ ನೋಡಿದ್ರು ಸಲಗಾದೆ ಸುದ್ದಿ, ಯಾರ ಬಾಯಲ್ಲೂ ದುನಿಯಾ ವಿಜಯ್ ಅವರ ಸಲಗ ನದೇ ಮಾತು. ಸ್ಯಾಂಡಲ್ ವುಡ್ ನಲ್ಲಿ ‘ಸಲಗ’ ದಿನದಿಂದ ದಿನಕ್ಕೆ ಹೈಪ್ ಕ್ರಿಯೇಟ್ ಮಾಡ್ತಿದೆ. ಅಭಿಮಾನಿಗಳಂತೂ ಅಕ್ಟೋಬರ್ 14 ಯಾವಾಗ ಬರತ್ತೆ ಅಂತ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಇಷ್ಟೆಲ್ಲಾ ಕ್ಯೂರಿಯಾಸಿಟಿ ಹುಟ್ಸಿರೋ ಸಲಗ ದಲ್ಲಿ ಈಗ ಸಲಗ v/s ಸಾಮ್ರಾಟ್ ಮಧ್ಯೆ ನಾನಾ ನೀನಾ ಫೈಟ್ ಶುರುವಾಗಿದೆ. ಈ ಫೈಟ್ ಗೆ ಏನು ರೀಸನ್.? ಎಂದು ತಿಳಿಯಲು ಸಿನಿಮಾ ರಿಲೀಸ್ ಆಗೋವರೆಗೂ ಕಾಯಲೇ ಬೇಕಿದೆ.
ಮಾಸ್ ಪ್ರೇಕ್ಷಕರಿಗೆ ಹಬ್ಬದೂಟ:
ಈ ಸಿನಿಮಾದಲ್ಲಿ ದುನಿಯಾ ವಿಜಯ್ ನಾಯಕರಾಗಿದ್ದಾರೆ. ಇದರಲ್ಲಿ ಡಾಲಿ ಧನಂಜಯ ಕೂಡ ಪ್ರಮುಖ ಪಾತ್ರವನ್ನು ಪೋಷಿಸಿದ್ದು, ಸಿನಿಮಾದಲ್ಲಿ ಇವರಿಬ್ಬರ ಜಿದ್ದಾಜಿದ್ದಿ ಪ್ರೇಕ್ಷಕರಿಗೆ ಹಬ್ಬದೂಟವನ್ನು ನೀಡಲಿದೆ.
‘ನಾನು ಮತ್ತು ನನ್ನ ತಂಡ ಈ ಕಥೆಯನ್ನು ಚರ್ಚೆ ಮಾಡುವಾಗ ಸಾಮ್ರಾಟ್ ಪಾತ್ರಕ್ಕೆ ಧನಂಜಯ ಅವರನ್ನು ಹಾಕಿದರೆ ಹೇಗೆ ಎಂಬ ಮಾತು ಬಂತು. ಧನು ಈ ಪಾತ್ರಕ್ಕೆ ಪಕ್ಕಾ ಸೂಟ್ ಆಗುತ್ತಾರೆ ಎಂದು ನನಗೂ ಎನಿಸಿತು. ಸೆಟ್‌ನಲ್ಲಿಯೂ ಯುನಿಫಾರ್ಮ್ ಧರಿಸಿ ಧನಂಜಯ ಬಂದಾಗ ಒಂದು ಕ್ಷಣ ಅವಾಕ್ಕಾದೆ. ಪಕ್ಕಾ ಎನ್‌ಕೌಂಟರ್ ಸ್ಪೆಷಲಿಸ್ಟ್ ಥರ ಧನಂಜಯ ಕಾಣುತ್ತಿದ್ದರು. ಜತೆಗೆ ಪ್ರಾಮಾಣಿಕತೆಯೇ ಯೂನಿಫಾರ್ಮ್ ಧರಿಸಿ ಬಂದಿತೇನೋ ಎಂಬ ಭಾವನೆ ನನಗೆ ಮೂಡಿತು. ನನ್ನ ಮತ್ತು ಧನಂಜಯ ನಡುವಿನ ಸಂಭಾಷಣೆ, ದೃಶ್ಯಗಳು ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತವೆ. ಮಾಸ್ ಪ್ರೇಕ್ಷಕರಿಗೆ ಇದು ಹಬ್ಬದೂಟ ಎನ್ನಬಹುದು’ ಎಂದು ಹೇಳುತ್ತಾರೆ ದುನಿಯಾ ವಿಜಯ್.
****