ಕರೋನಾ ಲಾಕ್ ಡೌನ್ ನಿಂದ ಎಲ್ಲವೂ ಅತಂತ್ರವಾಗಿತ್ತು. ಈಗ ಸರ್ಕಾರ ಆದೇಶದಂತೆ 100 % ಚಿತ್ರಮಂದಿರ ಪ್ರದರ್ಶನ ಪರ್ಮಿಷನ್ ಸಿಕ್ಕಿದ್ದು, ಇದೆ ಅಕ್ಟೋಬರ್ 08 ರಿಂದ ಅದ್ದೂರಿಯಾಗಿ “ನಿನ್ನ ಸನಿಹಕೆ” ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಾಹಿತಿಯನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.
ಡಾ.ರಾಜ್‌ಕುಮಾರ್ ಮೊಮ್ಮಗಳಾದ ಧನ್ಯಾ ರಾಮ್‌ಕುಮಾರ್ ಹಾಗೂ ಸೂರಜ್‌ಗೌಡ ಅಭಿನಯಸಿ ನಿರ್ದೇಶನ ಮಾಡಿರುವ “ನಿನ್ನ ಸನಿಹಕೆ” ಚಿತ್ರವನ್ನು ವೈಟ್ & ಗ್ರೇ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕೊಡ್ಲಿ ರವರು ನಿರ್ಮಿಸಿದ್ದಾರೆ.
ನಾಯಕ ಸೂರಜ್ ಅವರೇ ಈ ಚಿತ್ರದ ಕಥೆ , ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಒಂದು ಹಾಡು ಹಾಗೂ ಟ್ರೇಲರ್ ಪ್ರದರ್ಶನಗೊಂಡ ನಂತರ ನಟ ಸೂರಜ್ ಮಾತನಾಡುತ್ತಾ ಈ ಚಿತ್ರದ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಇದು ನನ್ನ ಮಟ್ಟಿಗೆ ವಿಭಿನ್ನ ಕಥಾಹಂದರ ಒಳಗೊಂಡಿದೆ.
ಲಿವಿಂಗ್ ರಿಲೇಶನ್‌ಷಿಪ್ ಕಥೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ರೊಮ್ಯಾಂಟಿಕ್ ಕಾಮಿಡಿಯೊಂದಿಗೆ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಒಳಗೊಂಡಿದೆ. ಎಲ್ಲಾ ವರ್ಗದವರಿಗೂ ಇಷ್ಟವಾಗುವಂತಹ ಚಿತ್ರ ಇದಾಗಲಿದೆ.
ಈ ಚಿತ್ರದಲ್ಲಿ 08 ಹಾಡುಗಳಿದ್ದು , ಪ್ರತಿ ಹಾಡು ಹಿಟ್ ಆಗಿದೆ, ನಿರ್ಮಾಪಕರಿಗೆ ಓಟಿಟಿ ಸೇರಿದಂತೆ ಹಲವಾರು ಕಡೆಗಳಿಂದ ಆಫರ್ ಬಂದರೂ ಸಹ, ಯಾರಿಗೂ ಕೊಡದೆ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಬೇಕೆಂದು ಇಷ್ಟುದಿನ ಕಾದಿದ್ದರು, ರಘುದೀಕ್ಷಿತ್ ಸಂಗೀತ ಸಂಯೋಜನೆ ಮಾತ್ರವಲ್ಲದೆ ಚಿತ್ರದ ಪ್ರತಿ ಹಂತದಲ್ಲೂ ನಮ್ಮ ಜೊತೆಗಿದ್ದು ಕೆಲಸ ಮಾಡಿದ್ದಾರೆ. ಮೊದಲಿಂದಲೂ ನನಗೆ ಆ್ಯಕ್ಟಿಂಗಿಂತ ಡೈರೆಕ್ಟರ್ ಆಗಬೇಕೆಂಬುದೇ ನನ್ನ ಬಯಕೆಯಾಗಿತ್ತು, ನಿರ್ದೇಶನ ಮಾಡಿದ್ದು ನನಗೆ ಕಷ್ಟ ಅನಿಸಲಿಲ್ಲ, ಒಂದೊಳ್ಳೇ ಅನುಭವವಾಯ್ತು.
ಲವ್‌ಸ್ಟೋರಿ ಚಿತ್ರಗಳಲ್ಲಿ ಅಭಿನಯಿಸಬೇಕೆಂದು ತುಂಬಾ ಇಷ್ಟ, ಆದರೆ ಯಾವಾಗಲೂ ಥ್ರಿಲ್ಲರ್, ಎಕ್ಸಪರಿಮೆಂಟಲ್ ಚಿತ್ರಗಳೇ ಬರುತ್ತಿತ್ತು, ಕೊನೆಗೆ ನಾನೇ ಒಂದು ರೋಮ್, ಕಾಮ್ ಕಥೆ ಬರೆದೆ, ಅದನ್ನು ನಾನೇ ನಿರ್ದೇಶನ ಮಾಡಬೇಕಾಗಿಯೂ ಬಂತು, ನಮ್ಮ ಚಿತ್ರ ಅ.08ರಂದು ಬರುತ್ತಿದೆ. ಆದರೆ ಪ್ರೇಕ್ಷಕರನ್ನು ಗೆಲ್ಲಲು ನಮಗಿರುವುದು ಒಂದೇವಾರ, ಏಕೆಂದರೆ, ನಮ್ಮ ನಂತರದ ವಾರವೇ ಎರಡು ಸ್ಟಾರ್ ಚಿತ್ರಗಳು ಬರುತ್ತಿವೆ,
ಗ್ಯಾಪ್ ಇಟ್ಟುಕೊಂಡೇ ಬರೋಣ ಎಂದುಕೊಂಡಿದ್ದೆವು, ನಾವು ಡೇಟ್ ಅನೌನ್ಸ್ ಮಾಡಿದಾಗ ಯಾವ ಚಿತ್ರವೂ ಇರಲಿಲ್ಲ, ನಾನು ಈಗಲೂ ರಿಕ್ವೆಸ್ಟ್ ಮಾಡುತ್ತೇನೆ ದಯವಿಟ್ಟು ಪ್ರತಿವಾರ 1ಚಿತ್ರ ಬಂದರೆ ಎಲ್ಲರಿಗೂ ಅನುಕೂಲ ಆಗುತ್ತದೆ. ಏನೇ ಆಗಲಿ ನಮ್ಮ ಚಿತ್ರಕ್ಕೆ 1ವಾರ ಸಮಯ ಇದೆ ನಮ್ಮ ಚಿತ್ರ ಹೇಗಿದೆ ಎಂದು ಜನರೇ ಮುಂದೆ ನಿರೂಪಿಸುವುದಕ್ಕೆ ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.
ಇನ್ನು ಈ ಚಿತ್ರದ ನಾಯಕಿ ಧನ್ಯ ರಾಮ್ ಕುಮಾರ್ ಮಾತನಾಡುತ್ತಾ ಇದು ನನ್ನ ಮೊದಲ ಚಿತ್ರ. ನಾನು ಚಿತ್ರದಲ್ಲಿ ಡೆಂಟಿಸ್ಟ್ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಚಿತ್ರ ಯೂತ್ ಓರಿಯೆಂಟೆಡ್ ಸಬ್ಜೆಕ್ಟ್ ಆಗಿದೆ.ನಾನು ಈ ಚಿತ್ರದ ಮೂಲಕ ನಾನು ಬಹಳಷ್ಟು ಕಲಿತಿದ್ದೇನೆ. ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರೂ ಇಷ್ಟಪಟ್ಟಿದ್ದಾರೆ. ನನ್ನ ಪಾತ್ರವೂ ವಿಭಿನ್ನವಾಗಿದೆ ನಿರ್ದೇಶಕ ಕಮ್ ನಟ ಸೂರಜ್ ಜತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ ಆಗಿದೆ. ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮಾತನಾಡಿ ಈ ಚಿತ್ರದ ನಿರ್ದೇಶಕರು ಬಹಳ ಪರ್ಟಿಕ್ಯುಲರ್ ಆಗಿದ್ರು, ಅವರಿಗೆ ಯಾವ ರೀತಿ ಬೇಕಿತ್ತು ಆ ರೀತಿ ನನ್ನಿಂದ ಸಂಗೀತ ಪಡೆದಿದ್ದಾರೆ. ಒಟ್ಟು 8ಹಾಡುಗಳಿದ್ದು , ಒಂದಕ್ಕಿಂತ 1 ವಿಭಿನ್ನವಾಗಿದೆ. ಚಿತ್ರ ಪರ್ಫೆಕ್ಟಾಗಿ ಬರಲು ಇಡೀ ತಂಡದ ಶ್ರಮ ವಹಿಸಿದೆ. ಯಾವುದೇ 1ಸರಿ ಇಲ್ಲ ಎಂದರು ಮತ್ತೆ ಅದನ್ನು ಎಡಿಟ್ ಮಾಡಿ ಚಿತ್ರವನ್ನು ಅದ್ಬುತವಾಗಿ ತಂದಿದ್ದಾರೆ.
ಆದರೆ ಇಂಥ 1ಒಳ್ಳೆ ಚಿತ್ರ ಬರುವಾಗ ಚಿತ್ರಮಂದಿರಗಳ ಸಮಸ್ಯೆ ಆಗುವುದು ಬೇಡ. ಯಾಕೆಂದರೆ ಮುಂದಿನ ವಾರ 2 ಸ್ಟಾರ್ ನಟರ ಚಿತ್ರಗಳು ಬರುವುದರಿಂದ ಚಿತ್ರಮಂದಿರಗಳ ಸಮಸ್ಯೆ ಆಗುವುದು ಸರ್ವೆ ಸಾಮಾನ್ಯ , ಆದರೆ “ನಿನ್ನ ಸನಿಹಕೆ” ತಂಡಕ್ಕೆ ಯಾವುದೇ ಭಯ ಬೇಡ ಚಿತ್ರ ಚೆನ್ನಾಗಿದೆ ಖಂಡಿತ ಯಶಸ್ಸಿನತ್ತ ಸಾಗುತ್ತದೆ ಎಂಬ ಭರವಸೆ ಇದೆ ಎಂದು ಹೇಳುತ್ತಾ ಈ ಚಿತ್ರದಲ್ಲಿ ಗಾಯನ ಮಾಡಿದ ಗಾಯಕರ ಪರಿಚಯವನ್ನು ಕೂಡ ಮಾಡಿಕೊಟ್ಟರು.
ಇನ್ನು ಈ ಚಿತ್ರವನ್ನ ನಿರ್ಮಿಸಿದಂಥ ಅಕ್ಷಯ್ ರಾಜಶೇಖರ್ ಮಾತನಾಡುತ್ತಾ ನಾವು ಗೆಳೆಯನಿಗಾಗಿ ಚಿತ್ರವನ್ನು ಮಾಡಿದ್ದೇವೆ. ಇದು ಬಹಳ ವಿಭಿನ್ನವಾಗಿ ಬಂದಿದೆ. ಇದೆ 8ರಿಂದ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ನಮಗೆ ಈಗಾಗಲೇ ಓಟಿಟಿ ಯಿಂದ ಆಫರ್ ಕೂಡ ಬಂದಿತ್ತು.
ಆದ್ರೆ ನಾವು ಚಿತ್ರಮಂದಿರಗಳಲ್ಲಿ ಬರಬೇಕೆಂಬ ಮಹದಾಸೆ ಇತ್ತು ಹಾಗಾಗಿ ಈಗ ಹಂಡ್ರೆಡ್%ಓಪನ್ ಆಗಿದೆ ನಿವೆಲ್ಲರೂ ನಮ್ಮ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿ ಬೆಂಬಲಿಸಿ ಎಂದು ಕೇಳಿಕೊಂಡರು. ಮತ್ತೊಬ್ಬ ನಿರ್ಮಾಪಕ ರಂಗನಾಥ್ ಕುಡ್ಲಿ ಮಾತನಾಡುತ್ತಾ ಇದೊಂದು ಯೂತ್ ಸಬ್ಜೆಕ್ಟ್ ಆಗಿದೆ. ನಿರ್ದೇಶಕರು ಬಹಳ ಶ್ರಮವಹಿಸಿ ಈ ಚಿತ್ರವನ್ನು ಮಾಡಿದ್ದಾರೆ. ಹಾಡುಗಳು ತುಂಬ ಚೆನ್ನಾಗಿದೆ.ಇದೇ 8ರಂದು ಅದ್ದೂರಿಯಾಗಿ ಚಿತ್ರವನ್ನ ತೆರೆಮೇಲೆ ತರುತ್ತಿದ್ದೇವೆ ಎಲ್ಲರೂ ಚಿತ್ರವನ್ನು ನೋಡಿ ಹರಸಿ ಎಂದರು.
ಸದ್ಯ ಈಗಾಗಲೇ ಬಿಡುಗಡೆಗೊಂಡಿರುವ ಹಾಡುಗಳು ಎಲ್ಲೆಡೆ ಭಾರೀ ವೈರಲ್ ಆಗಿದ್ದು , ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇನ್ನೂ ಚಿತ್ರಮಂದಿರದಲ್ಲಿ “ನಿನ್ನ ಸನಿಹಕೆ” ಯಾವ ರೀತಿ ಎಲ್ಲರನ್ನ ತನ್ನತ್ತ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕು.
****

