ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನು ನಾಯಕನಾಗಿ ನಟಿಸಿರುವ “ಮುಗಿಲ್ ಪೇಟೆ” ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ. “ಮುಗಿಲ್ ಪೇಟೆ ” ಅದ್ದೂರಿಯಾಗಿ ಮೂಡಿಬಂದಿದ್ದು, ಸಿನಿರಸಿಕರಿಗೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಲಿದೆ. ಈ ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.
ಮನು ಅವರಿಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು “ಮುಗಿಲ್ ಪೇಟೆ” ಯಲ್ಲಿ ಅಭಿನಯಿಸಿದ್ದಾರೆ. ಮೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಮುಗಿಲ್ ಪೇಟೆ ಚಿತ್ರಕ್ಕೆ ಭರತ್ ಎಸ್ ನಾವುಂದ ಅವರ ನಿರ್ದೇಶನವಿದೆ. ಭರತ್ ಅವರಿಗೆ ಇದು ಎರಡನೇ ಚಿತ್ರವಾಗಿದ್ದು ಈ ಹಿಂದೆ “ಅಡಚಣೆಗಾಗಿ ಕ್ಷಮಿಸಿ” ಚಿತ್ರವನ್ನು ನಿರ್ದೇಶಿಸಿದ್ದರು.
ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ರವಿವರ್ಮ (ಗಂಗು) ಅವರ ಛಾಯಾಗ್ರಹಣ ಅರ್ಜುನ್ ಕಿಟ್ಟು ಸಂಕಲನ, ಡಾ||ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನ, ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಹನುಮಂತು ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
****