ಕೊರೋನಾ ಕಾಟದಿಂದ ರಿಲೀಫ್ ಸಿಕ್ಕಿರೋದ್ರಿಂದ ಕನ್ನಡ ಫಿಲ್ಮ್ ಇಂಡಸ್ಟ್ರೀ ಗರಿ ಬಿಚ್ಚಿ ಹಾರಲು ಶುರುಮಾಡಿದೆ. ಕಳೆದ ಎರಡು ವರ್ಷದಿಂದ ಥಿಯೇಟರ್ ಗಳು ಲಾಕ್ ಆಗಿದ್ದರಿಂದ ಇಡೀ ಚಿತ್ರ ರಂಗ ನಿಂತ ನೀರಿನಂತಾಗಿತ್ತು, ಈಗ ಸರ್ಕಾರ ಶೇ 100% ಆಕ್ಯೂಪೈ ಗೆ ಗ್ರೀನ್ ಸಿಗ್ನಲ್ ನೀಡಿರೋದ್ರಿಂದ ಬ್ಯಾಕ್ ಟು ಬ್ಯಾಕ್ ಚಿತ್ರಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿವೆ.
ಗುರುರಾಜ್ ಜಗ್ಗೇಶ್ ಮತ್ತು ತನುಜಾ ಅಭಿನಯದ ಚಂದ್ರಹಾಸ್ ನಿರ್ದೇಶನದ ಕಾಗೆ ಮೊಟ್ಟೆ ಸಿನಿಮಾ ಈ ಶುಕ್ರವಾರ ಅಕ್ಟೋಬರ್ 1ನೇ ತಾರೀಖಿಗೆ ರಿಲೀಸ್ ಆಗ್ತಿದೆ. ಶೇ 100%ಥಿಯೇಟರ್ ಒಪನ್ ಆದ ಮೊದಲನೇ ದಿನವೇ ಸಿನಿಮಾ ರಿಲೀಸ್ ಆಗ್ತಿದೆ. ಇತ್ತೀಚೆಗೆ ಕಾಗೆ ಮೊಟ್ಟೆ ಚಿತ್ರದ ಪ್ರೆಸ್ ಮೀಟ್ ಕೂಡ ನಡೆದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದೆ.
ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು ಗುರುರಾಜ್ ಜಗ್ಗೇಶ್ ಜೊತೆ ನಾಯಕಿಯಾಗಿ ತನುಜಾ ಅಭಿನಯಿಸಿದ್ದಾರೆ, ಮಾದೇಶ್, ಹೇಮಂತ್ , ಶರತ್ ಲೋಹಿತಾಶ್ವ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಚಿತ್ರಕ್ಕೆ ಚಂದ್ರಹಾಸ್ ಅವರು ಕಥೆ, ಮತ್ತು ನಿರ್ದೇಶನ ಮಾಡಿದ್ದಾರೆ, ಶ್ರೀವತ್ಸಾ ಅವರ ಸಂಗೀತವಿದ್ದು, ನೃತ್ಯನಿರ್ದೇಶನ ಹೈಟ್ ಮಂಜು ಅವರದ್ದು, ಸಂಭಾಷಣೆ ಡಾ.ನಾಗೇಂದ್ರ ಪ್ರಸಾದ್ ಬರೆದಿದ್ದು, ಚಂದ್ರಹಾಸ್ ಅವರೆ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ.
****