‘ನಿನ್ನ ಸನಿಹಕೆ’ ಚಿತ್ರದ ಒಲವಾಗಿದೆ ವಿಡಿಯೋ ಹಾಡು .ಇದೀಗ ರಿಲೀಸ್ ಆಗಿದೆ. ವಿಡಿಯೋ ಹಾಡಿನ ಜೊತೆಗೆ ಅ.8ಕ್ಕೆ ಸಿನಿಮಾ ರಿಲೀಸ್ ಅಂತ ಮತ್ತೊಮ್ಮೆ ಪ್ರೇಕ್ಷಕರಿಗೆ ಸಿನಿಮಾ ರಿಲೀಸ್ ಆಗ್ತಿರೋ ದಿನಾಂಕವನ್ನ ನೆನಪಿಸಿದೆ.
ಸೂರಜ್ ಗೌಡ ಹಾಗೂ ಧನ್ಯಾ ರಾಮ್ ಕುಮಾರ್ ನಟಿಸಿರುವ ರಘು ದೀಕ್ಷಿತ್ ಸಂಗೀತ ಸಂಯೋಜನೆಯ “ನಿನ್ನ ಸನಿಹಕೆ” ಚಿತ್ರದ ‘ಒಲವಾಗಿದೆ’ ರೊಮ್ಯಾಂಟಿಕ್ ಹಾಡನ್ನು ಬಾಲಿವುಡ್ ಖ್ಯಾತ ಗಾಯಕ ಬೆನ್ನಿ ದಯಾಲ್ ಮತ್ತು ಐಶ್ವರ್ಯ ರಂಗರಾಜನ್ ಕಂಠ ಸಿರಿಯಲ್ಲಿ ಕೇಳುತ್ತಾ ಒಲವನ್ನು ಸಂಭ್ರಮಿಸೋಣ ಎನ್ನುತ್ತಿದೆ ಚಿತ್ರ ತಂಡ.