‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕನಾಗಿ, ಸಂಜನಾದಾಸ್ ಮತ್ತು ಕಾಜಲ್ ಕುಂದರ್ ನಾಯಕಿಯರಾಗಿ ನಟಿಸಿರುವ, ಅರುಣ್ ಕುಮಾರ್ ನಿರ್ದೇಶನದ ಕೆಟಿಎಂ ಸಿನಿಮಾದ ಚಿತ್ರೀಕರಣ ಶೇ 90% ಪೂರ್ಣಗೊಂಡಿದೆ. ಇದು ಲವ್ ಸ್ಟೋರಿ ಕಥಾಹಂದರ ಹೊಂದಿದ್ದು, ಇದರಲ್ಲಿ ನಾಲ್ಕು ಛಾಯೆಗಳುಳ್ಳ ಪಾತ್ರದಲ್ಲಿ ದೀಕ್ಷಿತ್ ನಟಿಸುತ್ತಿರುವುದು ವಿಶೇಷ.
ನಟ ದೀಕ್ಷಿತ್ ಕನ್ನಡ ಚಿತ್ರರಂಗವಲ್ಲದೆ ತೆಲುಗು ಸಿನಿಮಾದಲ್ಲಿ ನಟಿಸಿದ್ದು ಮೇಲಿಂದ ಮೇಲೆ ಆಫರ್ ಗಳು ಬರುತ್ತಿವೆ. ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶ ಇರುವ ಕೆಟಿಎಂ ಚಿತ್ರದಲ್ಲಿ 4 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಹೀಷ್ಮ ಮೂವಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ, ಚೇತನ್ ರಾವ್ ಅವರ ಸಂಗೀತವಿದೆ, ನವೀನ್ ಛಾಯಾಗ್ರಹಣ, ವಿನಯ್ ಮತ್ತು ರಕ್ಷೈ ಅವರು ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ.
****