‘ಸಲಗ’ ಸಿನಿಮಾ ಸ್ಯಾಂಡಲ್ವುಡ್ನ ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಷ್ಟು ದಿನ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರ ಆಗಸ್ಟ್ 20ಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ, ಕೊವಿಡ್ನಿಂದ ಅದು ಸಾಧ್ಯವಾಗಿಲ್ಲ. ಥಿಯೇಟರ್ ಶೇ100 ಆಕ್ಯೂಪೈ ಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಸಲಗ ತಂಡ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಅಕ್ಟೋಬರ್ 14 ಕ್ಕೆ ದುನಿಯಾ ವಿಜಯ್ ನಟನೆಯ ‘ಸಲಗ’ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ದಸರಾ ಹಬ್ಬದ ಪ್ರಯುಕ್ತ ಈ ಚಿತ್ರ ತೆರೆಗೆ ಬರುತ್ತಿದೆ. ಲಾಕ್ಡೌನ್ ನಂತರ ಸ್ಯಾಂಡಲ್ವುಡ್ನಲ್ಲಿ ತೆರೆಕಾಣುತ್ತಿರುವ ಮೊದಲ ಬಿಗ್ ಬಜೆಟ್ ಚಿತ್ರ, ಈಗಾಗಲೇ ರಿಲೀಸ್ ಆಗಿರುವ ಸಲಗ ಚಿತ್ರದ ಸಾಂಗ್ಸ್ ಸಕತ್ ಸೌಂಡ್ ಮಾಡ್ತಿವೆ. ಪಾತ್ರಗಳ ಬಗ್ಗೆಯೂ ಸಾಕಷ್ಟು ಕುತೂಹಲ ಕೆರಳಿಸಿರುವ ಸಲಗ ಚಿತ್ರದಲ್ಲಿ ಸೂರಿಯಣ್ಣ ಪಾತ್ರವೂ ಒಂದು..
ಸಲಗ ಚಿತ್ರದಲ್ಲಿ ವಿಲನ್ ರೋಲ್ನಲ್ಲಿ(ಸೂರಿಯಣ್ಣ) ಮುಖ್ಯ ಪಾತ್ರದಲ್ಲಿ ಕಾಣಿಸಿರುವ ದಿನೇಶ್ ಅವರ ಸಂದರ್ಶನ ಅವರ ಸಲಗ ಚಿತ್ರದ ಅನುಭವಗಳನ್ನು ಕನ್ನಡ ಪಿಚ್ಚರ್ ಜೊತೆ ಹಂಚಿಕೊಂಡಿದ್ದಾರೆ.