31.5 C
Bengaluru
Tuesday, March 28, 2023
spot_img

ಸಿದ್ಲಿಂಗು 2 ಗೆ ತಯಾರಾದ ಯೋಗಿ..! ಜೊತೆಯಾಗ್ತಾರಾ ರಮ್ಯಾ..?

ನಟ ಯೋಗಿ ಗೆ ಸಿನಿಮಾ ಕೆರಿಯರ್ ನಲ್ಲಿ ಅತೀ ಹೆಚ್ಚು ನೇಮ್ ಮತ್ತು ಫೇಮ್ ತಂದುಕೊಟ್ಟ ಚಿತ್ರ ಸಿದ್ಲಿಂಗು. 2012 ರಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಪಾತ್ರಗಳ ಮೂಲಕವೂ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಚಿತ್ರದಲ್ಲಿ ಯೋಗಿಗೆ ಸ್ಯಾಂಡಲ್‌ ವುಡ್‌ ಕ್ವೀನ್‌ ರಮ್ಯಾ ನಾಯಕಿಯಾಗಿ ನಟಿಸಿದ್ದರು. ನಟಿ ಸುಮನ್‌ ರಂಗನಾಥ್‌ ಪ್ರಮುಖ ಪಾತ್ರದಲ್ಲಿದ್ದರು.

ಪಕ್ಕಾ ಯೋಗಿ ಸ್ಟೈಲ್‌ ನ ಈ ಸಿನಿಮಾದ ಮುಂದುವರಿದ ಭಾಗದ ಬಗ್ಗೆಯೂ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದರು. ಇದೀಗ ನಿರ್ದೇಶಕ ವಿಜಯ್‌ ಪ್ರಸಾದ್‌ ಅವರು ಈ ಸಿನಿಮಾದ ಸೀಕ್ವೆಲ್‌ಗೆ ಸಿದ್ಧತೆ ನಡೆಸಿದ್ದು, ಇದರಲ್ಲಿಯೂ ಲೂಸ್‌ ಮಾದ ಯೋಗಿಯೇ ನಾಯಕರಾಗಿದ್ದಾರೆ. ಇನ್ನುಳಿದಂತೆ ರಮ್ಯಾ ಈ ಸಿನಿಮಾದಲ್ಲಿ ಇರಲಿದ್ದಾರಾ? ಸುಮನ್ ರಂಗನಾಥ್ ಪಾತ್ರ ಮುಂದುವರಿಯಲಿದೆಯೇ? ಎಂಬುದು ಎಲ್ಲರ ಕುತೂಹಲ ಈ ಕುತೂಹಲಕ್ಕೆ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

ಸಿದ್ಲಿಂಗು ಸಿನಿಮಾದಲ್ಲಿ ನಾಯಕಿ ರಮ್ಯಾ ಅವರ ಪಾತ್ರವೂ ಬಹಳ ಮೆಚ್ಚುಗೆ ಪಡೆದಿತ್ತು. ಈಗ ಇದರ ಸೀಕ್ವೆಲ್‌ಗೆ ಹೊಸ ನಾಯಕಿಯನ್ನು ನಿರ್ದೇಶಕರು ಹುಡುಕುತ್ತಿದ್ದಾರೆ. ಆ ಸಮಯದಲ್ಲಿ ಸ್ಟಾರ್ ನಟಿಯಾಗಿದ್ದ ರಮ್ಯಾಗೆ ಸರಿಸಮಾನವಾದ ನಟಿಯೇ ಇದರಲ್ಲಿ ಇರುತ್ತಾರೆಯೇ ಎಂಬ ಕುತೂಹಲವೂ ವ್ಯಕ್ತವಾಗಿದೆ. ತಮ್ಮ ಸಿನಿಮಾ ಶೈಲಿ ಮತ್ತು ಕಥೆಯನ್ನು ಯಾರು ಇಷ್ಟಪಡುತ್ತಾರೋ ಅಂತಹ ನಟಿಗೆ ತಮ್ಮ ಸಿನಿಮಾದಲ್ಲಿ ನಾಯಕಿ ಸ್ಥಾನ ಎಂದು ವಿಜಯ್ ಪ್ರಸಾದ್ ಹೇಳಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles