ಚಂದ್ರಹಾಸ್ ನಿರ್ದೇಶನದ. ಗುರುರಾಜ್ ಜಗ್ಗೇಶ್ ಮತ್ತು ತನುಜಾ ಅಭಿನಯದ ಚಿತ್ರ ‘ಕಾಗೆ ಮೊಟ್ಟೆ’ ಪಿಳ್ಳೆ ಗೋವಿ ಕೃಷ್ಣನ ಕಥೆ..? ಚಿತ್ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ ‘ಕಾಗೆ ಮೊಟ್ಟೆ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಈ ವೇಳೆ ಜಗ್ಗೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಚಿತ್ರತಂಡಕ್ಕೆ ಶಹಬ್ಬಾಸ್ಗಿರಿ ನೀಡಿದ್ದಾರೆ. ಹಿಂದಿಯಲ್ಲಿ ಬಂದ ‘ಮಿರ್ಜಾಪುರ್’ ಮೊದಲಾದ ಸೀರೀಸ್ಗಳನ್ನು ನೋಡಿರುತ್ತಾರೆ. ಆ ಮಾದರಿಯಲ್ಲಿ ಈ ಚಿತ್ರ ಇರಲಿದೆ. ಅದಕ್ಕಾಗಿ ನಿರ್ದೇಶಕರು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಅವರು ನುಡಿದಿದ್ದಾರೆ.
ನನ್ನ ಮಗನ ಭವಿಷ್ಯವನ್ನ ನಾನೇ ಹಾಳು ಮಾಡಿದೆ ಅವನಿಗೆ ತೆಲುಗು ಮತ್ತು ತಮಿಳು ಸಿನಿಮಾ ಇಂಡಸ್ಟ್ರಿಯಿಂದ ಸಾಕಷ್ಟು ಆಫರ್ ಗಳು ಬಂದಿದ್ದವು ಆದರೆ ನಾನೆ ಬೇಡ ಎಂದು ಹೇಳಿದೆ. ಏನಾದರೂ ಸಾಧನೆ ಮಾಡುವುದಿದ್ದರೆ ಇಲ್ಲೇ ಮಾಡು ಎಂದು ಅವನನ್ನು ತಡೆದು ತಪ್ಪು ಮಾಡಿಬಿಟ್ಟೆ, ‘ಕಾಗೆ ಮೊಟ್ಟೆ’ ಚಿತ್ರ ನೋಡಿದೆ ಬೇರೆಯದೆ ಲೆವೆಲ್ ಗೆ ಮೂಡಿ ಬಂದಿದೆ. ಜನ ಕಂಡಿತ ಇಷ್ಟ ಪಡುತ್ತಾರೆ ಯಾವತ್ತು ಮಕ್ಕಳನ್ನು ನಾವು ಕಂಟ್ರೋಲ್ ಮಾಡಬಾರದು ಹಕ್ಕಿ ಎಷ್ಟು ಎತ್ತರಕ್ಕೆ ಹಾರಲು ಬಯಸುತ್ತದೆಯೋ ಅದನ್ನ ಸ್ವತಂತ್ರವಾಗಿ ಬಿಡಬೇಕು ಹಾಗೆಯೇ ಗುರು ವನ್ನು ನಾನು ಹಾರಲು ಬಿಡಬೇಕಿತ್ತು ಎಂದರು. ಜಗ್ಗೇಶ್ ಅವರ ಮನದಾಳದ ಮಾತು
****