ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾ ಶೂಟಿಂಗ್ ಅಕ್ಟೋಬರ್ 5 ರಿಂದ ಪುನಾರಂಭವಾಗಲಿದೆ. ಸಿನಿಮಾದ ಚಿತ್ರೀಕರಣವನ್ನು ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಶೂಟಿಂಗ್ ಸ್ಥಗಿತಗೊಂಡಿತ್ತು. ರವಿ ವರ್ಮ ಕೊರಿಯೋಗ್ರಾಪ್ ಮಾಡಿರುವ ಪೈಟಿಂಗ್ ದೃಶ್ಯದ ಶೂಟಿಂಗ್ ಪೂರ್ಣಗೊಂಡಿತ್ತು.ಸದ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಕಲಾವಿದರು ಮತ್ತು ಸಿನಿಮಾ ಸಿಬ್ಬಂದಿ ಶೂಟಿಂಗ್ ಗೆ ಮರಳಲು ರೆಡಿಯಾಗಿದ್ದಾರೆ.
ಮುಂಬರುವ ಶೆಡ್ಯೂಲ್ ನಲ್ಲಿ ಪ್ರಿಯಾಂಕಾ ಕುಮಾರ್ ಸೆಟ್ ಗೆ ಸೇರಲಿದ್ದಾರೆ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ನಲ್ಲಿ ಅಭಿಷೇಕ್ ಜೊತೆ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ನಟಿಸುತ್ತಿದ್ದಾರೆ. ರಚಿತಾ ರಾಮ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೊದಲು ಅಮರ್ ಸಿನಿಮಾದಲ್ಲಿ ನಟಿಸಿದ್ದ ಅಭಿಷೇಕ್ ಅಂಬರೀಷ್ ಎರಡನೇ ಸಿನಿಮಾ ಇದಾಗಿದೆ. ಕೆಎಂ ಸುಧೀರ್ ನಿರ್ಮಾಣದ ಸಿನಿಮಾಗೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣವಿದೆ.
****