ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಪುಸ್ತಕವೊಂದನ್ನು ಬರೆದಿದ್ದಾರಂತೆ. ರಂಜನಿ ಕೇವಲ ನಟನೆ ಮಾತ್ರವಲ್ಲದೆ ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದು, ಇದೀಗ ಅವರು ಬರದಿರುವ ಕಥೆಗಳನ್ನು ಸೇರಿಸಿ ಕತೆ ಡಬ್ಬಿ ಎಂಬ ಪುಸ್ತಕ ಬಿಡುಗಡೆ ಮಾಡ್ತಿದ್ದಾರೆ.
ಸೆ.29 ರಂದು ರಂಜನಿ ಅವರು ಬರೆದಿರುವ 16 ಕಥೆಗಳ ಪುಸ್ತಕ ಜನರ ಕೈ ಸೇರಲಿದೆ. ತಮ್ಮ ವಿದ್ಯಾಭ್ಯಾಸದ ಬಳಿಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ರಂಜಿನಿ ಸಾಹಿತ್ಯ, ಅಧ್ಯಯನದ ಕಡೆ ಒಲವು ಮೂಡಿಸಿಕೊಂಡರು. ತಾವು ಧಾರಾವಾಹಿಯಲ್ಲಿ ನಟಿಸುತ್ತಿರುವಾಗ ಬರವಣಿಗೆಯ ಬಗ್ಗೆ ಆಸಕ್ತಿ ಹುಟ್ಟಿಸಿಕೊಂಡಿದ್ದರು. ಇದೀಗ ಕಥೆಗಳು, ಚಿತ್ರಕಥೆ ಸೇರಿ ಎಲ್ಲಾ ರೀತಿಯ ಬರವಣಿಗೆಯಲ್ಲೂ ರಂಜಿನಿ ಸೈ ಎನಿಸಿಕೊಂಡಿದ್ದಾರೆ. ಬಹುರೂಪಿ ವತಿಯಿಂದ ರಂಜನಿ ಅವರ ಕತೆ ಡಬ್ಬಿ ಪುಸ್ತಕ ಪ್ರಕಟವಾಗುತ್ತಿದ್ದು ಪುಸ್ತಕವನ್ನು ಮುಂಗಡ ಕೊಂಡವರಿಗೆ ಶೇ10% ರಿಯಾಯ್ತಿ ಕೂಡ ಇರಲಿದೆ.
