ಕೆಜಿಎಫ್.. ಕೆಜಿಎಫ್… ಕೆಜಿಎಫ್.. ಇದೊಂದು ಹೆಸ್ರು ಕೇಳಿದ್ರೆ ಸಾಕು.. ಮೈ ಝಂ ಅನ್ನೋ ಫೀಲಿಂಗ್. ಆ ಹೆಸರಿನಲ್ಲೊಂದು ಪವರ್ ಇದೆ, ಖದರ್ ಇದೆ.. ಕೆಜಿಎಫ್ 1 ಅನ್ನು ಥಿಯೇಟರ್ನಲ್ಲಿ ಕಣ್ತುಂಬಿಕೊಂಡೋರಿಗೆ ಅದೊಂದೆ ಚಡಪಡಿಕೆ.. ಚಾಪ್ಟರ್ 2 ಸಿನಿಮಾನ ಅದ್ಯಾವಾಗ ನೋಡ್ತಿವೋ ಅನ್ನೋದು. ಈ ಕೊರೊನಾ ಮಹಾಮಾರಿಯ ಕಾಟ ಇಲ್ಲದಿದ್ರೆ, ಕೆಜಿಎಫ್ 2 ಇಷ್ಟೊತ್ತಿಗೆ ಇರೋ ಬರೋ ದಾಖಲೆಗಳನ್ನು ಚಿಂದಿ ಉಡಾಯಿಸಿ, ಇತಿಹಾಸ ಬರೆಯುತ್ತಿತ್ತು. ಆದ್ರೆ ಆ ಸಂಭ್ರಮಕ್ಕೆಲ್ಲ ಕೊರೊನಾ ದಾರಿ ಮಾಡಿಕೊಡಲಿಲ್ಲ. ಇಷ್ಟಾದ್ರೂ ಕೆಜಿಎಫ್ ಚಾಪ್ಟರ್ 2 ಮೇಲಿನ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ.
200 ದಿನಕ್ಕೂ ಮೊದಲೇ ಸಂಭ್ರಮ..!
ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನವನ್ನು ಚಿತ್ರತಂಡ ಎರಡು ಬಾರಿ ಅನೌನ್ಸ್ ಮಾಡಿತ್ತು. ಚಿತ್ರತಂಡಕ್ಕೆ ಬಿಡುಗಡೆ ಮಾಡೋ ಮನಸ್ಸಿದ್ರೂ, ಕೊರೊನಾ ಬಿಟ್ಟಿರಲಿಲ್ಲ. ಇದೆಲ್ಲವನ್ನೂ ವಿಶ್ಲೇಷಿಸಿ, ಈ ವರ್ಷ ಬರೋದೆ ಬೇಡ. ಮುಂದಿನ ವರ್ಷವೇ ಬರೋಣ ಅಂತಾ ಚಿತ್ರತಂಡ ನಿರ್ಧರಿಸಿತ್ತು. ಏಪ್ರಿಲ್ 12, 2022 ರಂದು ಬರ್ತೀವಿ ಅಂತಾ ಹೊಂಬಾಳೆ ಫಿಲಂಸ್ ಘೋಷಿಸಿತ್ತು. ಅಲ್ಲಿಂದಲೇ ರಾಕಿ ಭಾಯ್ ಅಭಿಮಾನಿಗಳ ಅಬ್ಬರ ಮುಗಿಲು ಮುಟ್ಟಿತ್ತು. ರಿಲೀಸ್ ತುಂಬಾ ಲೇಟಾಯ್ತು ಅಂತಾ ಮೊದಲಿಗೆ ಅನ್ನಿಸಿದ್ರೂ.. ಆನಂತರದಲ್ಲಿ ಲೇಟಾದ್ರೂ ಲೇಟೆಸ್ಟಾಗಿಯೇ ಬರ್ತಾನೆ ಬಿಡಿ ನಮ್ ರಾಕಿ ಅಂತಾ ಸಮಾಧಾನ ಪಟ್ಟುಕೊಂಡಿದ್ರು. ಇದೀಗ ಸಿನಿಮಾ ರಿಲೀಸ್ಗೆ 200 ದಿನ ಇರುವಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ.. KGF2 in 200 Days ಹೆಸರಲ್ಲಿ ತಮ್ಮ ಪ್ರೀತಿ, ಬೆಂಬಲ, ನಿರೀಕ್ಷೆಯನ್ನು ಅಭಿಮಾನಿಗಳು ತೋರಿಸಿಕೊಟ್ಟಿದ್ದಾರೆ.
****