ನವರಸ ನಾಯಕ ಜಗ್ಗೇಶ್, ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜಕುಮಾರ್ ಅವರು ಒಟ್ಟಿಗೆ ಸೇರಿದ್ದು ಅಪ್ಪು ಮತ್ತು ಜಗ್ಗೇಶ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ನ 12 ನೇ ಚಿತ್ರ ಘೋಷಣೆಯಾಗಿ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸುತ್ತಿದ್ದು ಚಿತ್ರಕ್ಕೆ ‘ರಾಘವೇಂದ್ರ ಸ್ಟೋರ್ಸ್’ ಎಂಬ ಶೀರ್ಷಿಕೆ ಕೂಡ ಅನೌನ್ಸ್ ಆಗಿತ್ತು. ಈ ಚಿತ್ರಕ್ಕೆ ‘ರಾಮಾಚಾರಿ,ರಾಜಕುಮಾರ ಮತ್ತು ಯುವರತ್ನ’ ಖ್ಯಾತಿಯ ಸಂತೋಷ್ ಆನಂದ್ ರಾಮ್ ಆಕ್ಷನ್, ಕಟ್ ಹೇಳುತ್ತಿದ್ದಾರೆ.
ಈ ಅಪರೂಪದ ಭೇಟಿ ಕುರಿತು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದು, ನನ್ನ ಯುವ ಮಿತ್ರರೊಂದಿಗೆ ಕಳೆದ ಸಂತೋಷದ ಕ್ಷಣ ಎಂದಿದ್ದಾರೆ.