ಬಾಕ್ಸಿಂಗ್ ಲೋಕದ ದಿಗ್ಗಜ ಲೆಜೆಂಡ್ ಎಂದೇ ಹೆಸರಾದ ಮೈಕ್ ಟೈಸನ್ ಅವರು ಪ್ಯಾನ್ ಇಂಡಿಯಾ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಹೌದು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ಅಭಿನಯಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಲಿಗರ್’ ಚಿತ್ರದಲ್ಲಿ ಖ್ಯಾತ ಮಾಜಿ ಬಾಕ್ಸರ್ ಮೈಕ್ ಟೈಸನ್ ಕಾಣಿಸಲಿದ್ದಾರೆ.
ಲಿಗರ್ ಚಿತ್ರದ ಹೀರೋ ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದು ಭಾರತದ ಸಿನಿ ರಂಗದಲ್ಲೇ ಪ್ರಥಮ ಭಾರಿ ಕಾಣಿಸುತ್ತಿರುವ ಬಾಕ್ಸಿಂಗ್ ಲೋಕದ ಲೆಜೆಂಡ್ ಮೈಕ್ ಟೈಸನ್ ‘ ದಿ ಬ್ಯಾಡೆಸ್ಟ್ ಮ್ಯಾನ್ ಆಫ್ ಪ್ಲಾನೆಟ್ ಎಂದಿದ್ದಾರೆ.
ಲಿಗರ್ ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಗೋವಾದಲ್ಲಿ ನಡೆಯಲಿದ್ದು ಮೂಲಗಳ ಪ್ರಕಾರ ಮೈಕ್ ಟೈಸನ್ ಗೋವಾದಲ್ಲಿರುವ ಚಿತ್ರತಂಡವನ್ನು ಶೀಘ್ರದಲ್ಲಿ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ವಿಜಯ್ ದೇವರಕೊಂಡ ಮತ್ತು ಮೈಕ್ ಟೈಸನ್ ನಡುವೆ ನಡೆಯುವ ಕಾಳಗದ ದೃಶ್ಯದ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆ.