ಸದ್ಯ ಸಾಂಡಲ್ ವುಡ್ ನಲ್ಲಿ ಬ್ಯುಸಿ ಇರುವ ನಟರಲ್ಲಿ ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಅವರು ಅಭಿನಯಿಸುತ್ತಿರುವ ಹೊಸ ಚಿತ್ರದ ಟೈಟಲ್ ಲಾಂಚ್ ಆಗಲಿದೆ. ಡಾರ್ಲಿಂಗ್ ಕೃಷ್ಣಾ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಒಟ್ಟಿಗೆ ಅಭಿನಯಿಸುತ್ತಿರುವ ಚಿತ್ರಕ್ಕೆ ಇಂದು ಐಪಿಎಸ್ ಅಧಿಕಾರಿ ರವಿ ಡಿ ಚನ್ನಣನವರ್ ಟೈಟಲ್ ಅನಾವರಣಗೊಳಿಸಲಿದ್ದಾರೆ. ಸಂಜೆ 6.30ಕ್ಕೆ ಟೈಟಲ್ ಲಾಂಚ್ ಆಗುತ್ತಿದೆ.
ಪೊಲೀಸ್ ಅಧಿಕಾರಿ ಕೈಯಲ್ಲಿ ಟೈಟಲ್ ಲಾಂಚ್ ಮಾಡಿಸುತ್ತಿರುವುದರಿಂದ ಸಿನಿಮಾ ಕಥೆ ಪೊಲೀಸ್ ಕಥಾಹಂದರ ಹೊಂದಿರಲಿದೆಯೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಚಿತ್ರತಂಡ ಉತ್ತರ ನೀಡಬೇಕಿದೆ. ಸುಮಂತ್ ಕ್ರಾಂತಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವ ತೇಜಸ್ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮಾ ಅವರ ಆಯಕ್ಷನ್ ನಿರ್ದೇಶನ ಸಿನಿಮಾಗೆ ಇರಲಿದೆ.ಅರ್ಜುನ್ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣದೊಂದಿಗೆ, ರಶ್ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.
****