ಗಾಂಧಿನಗರದ ತುಂಬಾ ಇವತ್ತು ಒಂದೇ ಸುದ್ದಿ… ಸಲಗ – ಕೋಟಿಗೊಬ್ಬ ಒಟ್ಟಿಗೆ ಬರ್ತಾರಂತೆ.. ಈ ಗಜ- ಕೇಸರಿ ಕಾಂಬಿನೇಷನ್ ನೋಡೋಕೆ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.. ಇದು ಒಂದೆಡೆಯಾದ್ರೆ ಮತ್ತೊಂದೆಡೆ ಎರಡು ಸಿನಿಮಾ ಒಟ್ಟಿಗೆ ಬರೋಕೆ ಹೇಗೆ ಸಾಧ್ಯ..? ಅಕಸ್ಮಾತ್ ಬಂದರೇ ಏನೆಲ್ಲಾ ಪ್ಲಸ್ – ಮೈನಸ್ ಲೆಕ್ಕಾ ಹಾಕ್ತಿದ್ದಾರೆ ಚಿತ್ರರಂಗದ ನಿಪುಣರು.. ಇದ್ರ ನಡುವೆ ಕಿಚ್ಚ ಸುದೀಪ್ ಟ್ವೀಟ್ ಎಲ್ಲರ ಉಬ್ಬೇರಿಸಿದೆ..
ವಿಜಿ ನಿರ್ದೇಶನಕ್ಕೆ ಆಲ್ ದಿ ಬೆಸ್ಟ್..!
ಯೆಸ್.. ಕಿಚ್ಚನ ಟ್ವೀಟೊಂದು ಈಗ ಗಾಂಧಿನಗರದ ಟಾಕ್ ಆಗಿದೆ.. ಇಂದು ಮಧ್ಯಾಹ್ನವಷ್ಟೇ ಸಲಗ ಟೀಂ ರಿಲೀಸ್ ದಿನಾಂಕ ಅನೌನ್ಸ್ ಮಾಡಿತ್ತು.. ಈ ಸಂಬಂಧವಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ.. ಅಕ್ಟೋಬರ್ 14 ರಂದು ಬರ್ತಿರೋ ಸಲಗ ಟೀಂಗೆ ಶುಭಾಶಯ ಕೋರಿದ್ದಾರೆ.. ಜೊತೆಗೆ ನಿರ್ದೇಶಕನಾಗಿ ಕ್ಯಾಪ್ ತೊಟ್ಟಿರೋ ದುನಿಯಾ ವಿಜಯ್ಗೂ ಮನಸಾರೆ ಬೆಸ್ಟ್ ವಿಶೆಸ್ ತಿಳಿಸಿದ್ದಾರೆ..
ಅಂದ್ಹಾಗೆ ಇಲ್ಲಿ ಮತ್ತೊಂದು ವಿಷಯ ಎಲ್ಲರ ಗಮನ ಸೆಳೆದಿದೆ.. ಸಲಗ – ಕೋಟಿಗೊಬ್ಬ -3 ಒಂದೇ ದಿನ ರಿಲೀಸ್ ಆಗಲಿದೆ ಅನ್ನೋ ಸುದ್ದಿಯಾಗ್ತಿದೆ.. ಹೀಗಿದ್ರೂ ಒಬ್ಬ ಸ್ಟಾರ್ ನಟ ಮತ್ತೊಬ್ಬ ಸ್ಟಾರ್ ಸಿನಿಮಾಗೆ ಶುಭ ಕೋರುತ್ತಿರೋದು ಇಂಡಸ್ಟ್ರಿಯಲ್ಲಿ ಒಂದೊಳ್ಳೆ ಬೆಳವಣಿಗೆ. ಮತ್ತೊಂದು ಆ್ಯಂಗಲ್ನಲ್ಲಿ ಯೋಚಿಸೋದಾದ್ರೆ ಕೋಟಿಗೊಬ್ಬ -3.. ಸಲಗ ಸಿನಿಮಾಗೂ ಮುಂಚಿತವಾಗಿಯೇ ಅಥವಾ ಬಿಡುಗಡೆ ನಂತರದಲ್ಲಿ ರಿಲೀಸ್ ಆದ್ರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ..
ಸಲಗ ಸಿನಿಮಾ ಮುಹೂರ್ತದಿಂದಲೂ ಸುದೀಪ್, ಸಲಗ ಟೀಂಗೆ ಸಾಥ್ ಕೊಟ್ಟಿದ್ದಾರೆ.. ಅದೇ ರೀತಿ ರಿಲೀಸ್ಗೂ ತಮ್ಮ ಬೆಂಬಲ ಸೂಚಿಸಿದ್ದಾರೆ.. ಇದರಿಂದ ಸಲಗ – ಕೋಟಿಗೊಬ್ಬ 3 ಒಟ್ಟಿಗೆ ಬಿಡುಗಡೆಯಾದ್ರೂ ಹಬ್ಬನೇ.. ಅಥವಾ ಹತ್ತಿರದ ದಿನಗಳಲ್ಲಿ ಬಿಡುಗಡೆಯಾದ್ರೂ ಅಭಿಮಾನಿಗಳ ಪಾಲಿಗಿದ್ದು ಹಬ್ಬದೂಟ ಅನ್ನೋದ್ರಲ್ಲಿ ಸಂದೇಹವಿಲ್ಲ…