ಕೊರೊನಾ ಕಾಟ ಶುರು ಆಗಿದ್ದೇ ಆಯ್ತು… ಕನ್ನಡ ಚಿತ್ರರಂಗ ನಿಂತ ನೀರಾಗಿ ಬಿಟ್ಟಿತ್ತು.. ಯಾವುದೇ ಚಟುವಟಿಕೆಗಳು ನಡೆಯುತ್ತಿರಲಿಲ್ಲ.. ನಡೆದರೂ ಮೊದಲಿನಷ್ಟು ಉತ್ಸಾಹ ಕಾಣುತ್ತಿರಲಿಲ್ಲ.. ಕೊರೊನಾ ಭೀತಿ ಜೊತೆಗೆ ಥಿಯೇಟರ್ ಹೌಸ್ ಫುಲ್ಗೆ ನಿರ್ಬಂಧ ಇದ್ದಿದ್ರಿಂದ ತಲೆ ಮೇಲೆ ಕೈ ಹೊತ್ತು ಕೂತಿದ್ರು.. ಆದ್ರೀಗ ರಾಜ್ಯ ಸರ್ಕಾರ ಥಿಯೇಟರ್ ಮೇಲಿನ ನಿರ್ಬಂಧ ತೆಗೆದು ಹಾಕಿದೆ.. 100% ಆಸನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.. ಆದ್ರಿಂದ ಕಳೆದೆರಡು ವರ್ಷಗಳಿಂದ ಕಾದು ಕೂತಿದ್ದ ದೊಡ್ಡ ಸಿನಿಮಾಗಳು ರಿಲೀಸ್ಗೆ ಸೈ ಎನ್ನುತ್ತಿವೆ.. ಜೊತೆಗೆ ಬಿಡುಗಡೆಗೆ ದಿನಾಂಕವನ್ನೂ ಅಧಿಕೃತವಾಗಿ ಅನೌನ್ಸ್ ಮಾಡುತ್ತಿವೆ..
ಅಕ್ಟೋಬರ್ 14ಕ್ಕೆ ಸಲಗ.. ಕೋಟಿಗೊಬ್ಬ ಯಾವಾಗ..??
ಕೊರೊನಾ ಭೀತಿಯಿಂದ ಒಂದಷ್ಟು ಸ್ಟಾರ್ ಸಿನಿಮಾಗಳು ರಿಲೀಸ್ ಆಗದೆ ಉಳಿದಿದ್ದವು.. 100% ಕೊಟ್ಟಾಗಲೇ ಜನರೆದುರು ನಾವು ಬರೋಣ ಅಂತಾ ನಿರ್ಧರಿಸಿದ್ದವು.. ಈ ಕಾರಣದಿಂದ ಲೇಟಾದ್ರೂ ಲೇಟೆಸ್ಟ್ ಆಗಿ ಬರೋಣ ಅಂತಾ ಕಾದಿದ್ದರು. ಈಗ ರಾಜ್ಯ ಸರ್ಕಾರ ಸಂತಸದ ಸುದ್ದಿ ಕೊಟ್ಟಿರೋದ್ರಿಂದ.. ರಿಲೀಸ್ ದಿನಾಂಕವನ್ನು ಘೋಷಣೆ ಮಾಡ್ತಿದ್ದಾರೆ.. ಅದರಂತೆ ಶಿವಣ್ಣ ನಟನೆಯ ಭಜರಂಗಿ- 2 ಅಕ್ಟೋಬರ್ 29 ರಂದು ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ.. ಇದಕ್ಕೂ ಮೊದಲೇ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದ್ದ ದುನಿಯಾ ವಿಜಯ್ ನಟನೆಯ ಸಲಗ ಕೂಡ ಬರ್ತಿದೆ. ಅಕ್ಟೋಬರ್ 14 ರಂದು ಸಲಗ ರಿಲೀಸ್ ಆಗ್ತಿದ್ದು, ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.. ಮತ್ತೊಂದೆಡೆ ಇದೇ ದಿನ ಸುದೀಪ್ ನಟನೆಯ ಕೋಟಿಗೊಬ್ಬ 3 ಕೂಡ ಬಿಡುಗಡೆ ಆಗುವ ಸಾಧ್ಯತೆಯಿದೆ.. ಕೋಟಿಗೊಬ್ಬ 3 ಟೀಂ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.. ಆದರೂ ಅಕ್ಟೋಬರ್ 14 ರಂದೇ ಬಿಡುಗಡೆ ಮಾಡಬೇಕು ಅನ್ನೋ ಯೋಚನೆಯಲ್ಲಿದೆ. ಅಕಸ್ಮಾತ್ ಒಂದೇ ದಿನ ಈ ಎರಡು ಸಿನಿಮಾ ರಿಲೀಸ್ ಆದಲ್ಲಿ, ಮಾಸ್ ಪ್ರಿಯರಿಗೆ ಹಬ್ಬದೂಟ ಗ್ಯಾರಂಟಿ..
****