ಸಲಗ – ಕೋಟಿಗೊಬ್ಬ 3.. ಒಂದೇ ದಿನ ರಿಲೀಸ್ ಆಗ್ತಿವೆ.. ಇದು ಇಂಡಸ್ಟ್ರಿ ಪಾಲಿಗೆ ದೊಡ್ಡ ವೈಬ್ರೇಷನ್.. ಒಟ್ಟೊಟ್ಟಿಗೆ ಸ್ಟಾರ್ಸ್ ಸಿನಿಮಾ ಬರ್ತಿರೋದ್ರಿಂದ ಪ್ರೇಕ್ಷಕರನ್ನು ಥಿಯೇಟರ್ ಕಡೆ ಸೆಳೆಯಬಹುದು… ಮತ್ತೊಂದೆಡೆ ಈ ಸುದ್ದಿ ಸುಳ್ಳಾಗಲಪ್ಪಾ ಅಂತಾ ಸಣ್ಣ ಸಿನಿಮಾ ತಂಡಗಳು ಬೇಡಿಕೊಳ್ತಿವೆ.. ನಟ ಸೂರಜ್ ಗೌಡ ಈ ಬೆಳವಣಿಗೆಗೆ ಮತ್ತೊಂದು ಚರ್ಚೆ ಆರಂಭಿಸಿದ್ದಾರೆ..
ಥಿಯೇಟರ್ ಸಮಸ್ಯೆ ಎದುರಾಗಲಿದೆ..!
ಮೊನ್ನೆಯಷ್ಟೇ ನಿನ್ನ ಸನಿಹಕೆ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು.. ಅಕ್ಟೋಬರ್ 8 ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡ್ತೀವಿ ಅಂತಾ ತಿಳಿಸಿದ್ರು.. ಇದರ ನಡುವೆ ಸಲಗ – ಕೋಟಿಗೊಬ್ಬ 3 ಚಿತ್ರತಂಡಗಳ ನಿರ್ಧಾರದಿಂದ ತಲೆ ಕಡೆಸಿಕೊಂಡಿದೆ. ಸಲಗ ಅಕ್ಟೋಬರ್ 14 ರಂದು ಬರೋದು ಕನ್ಫರ್ಮ್.. ಇದ್ರ ಬೆನ್ನಲ್ಲೇ ಕೋಟಿಗೊಬ್ಬ 3 ಅಂದೇ ಬಿಡುಗಡೆಯಾಗೋ ಮಾತುಗಳು ಕೇಳಿ ಬರ್ತಿವೆ..
ಈ ಸುದ್ದಿ ‘ನಿನ್ನ ಸನಿಹಕೆ’ ತಂಡದ ನಿದ್ರೆ ಕೆಡೆಸಿದೆ.. ಒಂದೇ ವಾರದ ಹಂತದಲ್ಲಿ ಎರಡು ಸ್ಟಾರ್ ಸಿನಿಮಾಗಳು ರಿಲೀಸ್ ಆದಲ್ಲಿ, ನಮ್ಮ ಸಿನಿಮಾಗೆ ತೊಂದರೆ ಆಗಲಿದೆ. ‘ನಮ್ಮದು ಸಣ್ಣ ಸಿನಿಮಾ.. ಅಕಸ್ಮಾತ್ ಎರಡು ಸಿನಿಮಾ ಬಿಡುಗಡೆಯಾದ್ರೆ ನಮಗೆ ಥಿಯೇಟರ್ ಕೊರತೆ ಉಂಟಾಗಲಿದೆ.. ಆದ್ರಿಂದ ಸಲಗ- ಕೋಟಿಗೊಬ್ಬ 3 ಚಿತ್ರತಂಡ ಒಟ್ಟಿಗೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳಲಿ. ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗೆಲ್ಲುವಂತಾಗಲಿ’ ಅಂತಾ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.