ಸ್ವರ ಮಾಂತ್ರಿಕ, ಕಂಚಿನ ಕಂಠಸಿರಿಯ, ಗಾನ ಗಾರುಡಿಗ ಕನ್ನಡ ನಾಡಿನ ಜನರ ಮನಸೂರೆಗಂಡ ಗಾಯಕ ದಿ. ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನಗಲಿ ಇಂದಿಗೆ ಒಂದು ವರ್ಷ ತುಂಬುತ್ತಿದೆ. ಎಸ್.ಪಿ.ಬಿ ನಮ್ಮಿಂದ ಭೌತ್ತಿಕವಾಗಿ ಇಲ್ಲದಿದ್ದರು ಅವರ ಕಂಠ ಸಿರಿಯಲ್ಲಿ ಹೊಮ್ಮಿರುವ ರಾಗಗಳ ಮೂಲಕ ಸದಾ ನಮ್ಮೊಂದಿಗಿರುತ್ತಾರೆ. ಎಂದೂ ಮರೆಯಲಾರದ ವ್ಯಕ್ತಿತ್ವ ಎಸ್.ಪಿ.ಬಿ ಅವರದು.
ಭಾರತೀಯ ಸಂಗೀತ ಲೋಕದ ಸಾಮ್ರಾಟ . ಭಾವಗೀತೆ – ಭಕ್ತಿಗೀತೆ – ಚಿತ್ರಗೀತೆಗಳ ಗಾಯನದಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳ ಗಾಯಕ. ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಈ ದಿನ , ಅವರ ನೆನಪನ್ನು ಪದಗಳಲ್ಲಿ ಪೋಣಿಸಿ ರಾಗದಲ್ಲಿ ಬಂಧಿಸುವ ನಮ್ಮೀ ಪ್ರಯತ್ನ ಕನ್ನಡ ಪಿಚ್ಚರ್ ಅರ್ಪಿಸುವ ಗಾನ ಗಾರುಡಿಗ ಎಸ್.ಪಿ.ಬಿ ಗಾನ ನಮನ.