ನಾಗಚೈತನ್ಯ ಮತ್ತು ಸಮಂತಾ ವೈವಾಹಿಕ ಬದುಕು ವಿಚ್ಛೇದನದತ್ತ ಸಾಗಿದೆ ಎಂಬ ಸುದ್ದಿಗಳಿವೆ. ಅದಕ್ಕೆ ಪೂರಕವೆಂಬಂತೆ ಇಬ್ಬರೂ ಈಗ ಜೊತೆಯಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ತಮ್ಮ ವಿಚ್ಛೇದನ ಸುದ್ದಿಯನ್ನೂ ಅಲ್ಲಗಳೆದಿಲ್ಲ.
ಇದೀಗ ಲವ್ ಸ್ಟೋರಿ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ನಾಗಚೈತನ್ಯ ತಮ್ಮ ನಿವಾಸದಲ್ಲಿ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ನಾಗಚೈತನ್ಯ ತಂದೆ ನಾಗಾರ್ಜುನ, ಬಾಲಿವುಡ್ ನಟ ಅಮೀರ್ ಖಾನ್, ಲವ್ ಸ್ಟೋರಿ ಸಿನಿಮಾ ನಾಯಕಿ ಸಾಯಿ ಪಲ್ಲವಿ ಭಾಗಿಯಾಗಿದ್ದರು. ಆದರೆ ಸಮಂತಾ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಸಮಂತಾ ಗೈರಾಗಿರುವುದರಿಂದ ನೆಟ್ಟಿಗರು ಕೇಳುತ್ತಿದ್ದಾರೆ ಸಮಂತಾ ಇಲ್ಲಾ ಯಾಕೆ ..? ಎಂದು.
****