ಸ್ಯಾಂಡಲ್ ವುಡ್ ಮತ್ತು ಕರ್ನಾಟಕದ ರಾಜಕಾರಣದ ಕೇಂದ್ರದಂತಿರುವ ಹೆಚ್ಡಿಡಿ ಕುಟುಂಬಕ್ಕೆ ಈಗ ಮತ್ತೊಬ್ಬ ಸದಸ್ಯರ ಆಗಮನವಾಗಿದೆ, ಇದರಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ, ರೇವತಿ ದಂಪತಿಗೆ ಗಂಡು ಮಗು ಜನಿಸಿದೆ. ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ತಾಯಿ, ಮಗುವಿನ ಆರೋಗ್ಯ ವಿಚಾರಿಸಲಿದ್ದಾರೆ.
ಕಳೆದವಾರವಷ್ಟೆ ರೇವತಿ ಅವರ ಸೀಮಂತವನ್ನ ತುಂಬಾ ಗ್ರ್ಯಾಂಡ್ ಆಗಿ ಸೆಲಬರೇಟ್ ಮಾಡಿ ಸಂಭ್ರಮಿಸಿದ್ದ ಕುಟುಂಬಕ್ಕೆ ಮುದ್ದು ಮಗುವಿನ ಆಗಮನ ಸಂತಸವನ್ನ ಇಮ್ಮಡಿಗೊಳಿಸಿದೆ.
