22.9 C
Bengaluru
Sunday, March 26, 2023
spot_img

ದಿ ಸಂಚಾರಿ ವಿಜಯ್ ಗೆ ಮಂಸೋರೆ ಬರೆದ ಭಾವುಕ ಪತ್ರ..!

ಇಂದು ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ ಅವರು ಅಭಿನಯಿಸಿರು ಸಿನಿಮಾ ಪುಕ್ಸಟ್ಟೆ ಲೈಫು ಇಂದು ರಾಜಾದ್ಯಂತ ತೆರೆ ಕಾಣುತ್ತಿದೆ. ಮೈಸೂರಿನಲ್ಲಿ ನಡೆದ ಪ್ರೀಮಿಯರ್ ಶೋ ವೇಳೆ ಪುಕ್ಸಟ್ಟೆ ಲೈಫು ಚಿತ್ರತಂಡ ಸಂಚಾರಿ ವಿಜಯ್ ಅವರಿಗೆ ಚಿತ್ರಮಂದಿತದಲ್ಲಿ ಸೀಟ್ ರಿಸರ್ವ್ ಮಾಡುವ ಮೂಲಕ ದಿ ವಿಜಯ್ ಅವರನ್ನು ಸ್ಮರಿಸಿಕೊಂಡಿತ್ತು.

ನಟ ದಿ ಸಂಚಾರಿ ವಿಜಯ್  ಅಭಿನಯದ ಪುಕ್ಸಟ್ಟೆ ಲೈಫು ಇಂದು (ಸೆ 24) ರಾಜಾದ್ಯಂತ ತೆರೆ ಕಾಣುತ್ತಿದ್ದು ಸಂಚಾರಿ ವಿಜಯ್ ಆಪ್ತ ಗೆಳೆಯರಾದ ನಿರ್ದೇಶಕ ಮಂಸೋರೆ ಅವರು ವಿಜಿ ಅವರಿಗೆ ಪತ್ರವೊಂದನ್ನು ಬರೆಯುವ ಮೂಲಕ ಅಗಲಿದ ಗೆಳೆಯನನ್ನು ನೆನೆದು ಭಾವುಕರಾಗಿದ್ದಾರೆ. ಇಂದು ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿರುವ ಮಂಸೋರೆ ಕೂಡ ತಮ್ಮ ಗೆಳೆಯ ಸಂಚಾರಿ ವಿಜಯ್​ಗಾಗಿ ಒಂದು ಟಿಕೆಟ್​ ಖರೀದಿಸಿದ್ದಾರೆ.

Sanchari Vijay  ಸರ್ ನಿಮಗೊಂದು ಪತ್ರ.

ವಿಜಯ್ ಸರ್ ನಿಮ್ಮ ಸಿನೆಮಾ #ಪುಕ್ಸಟ್ಟೆಲೈಫ್ ರಿಲೀಸ್ ಆಗ್ತಿದೆ.

ಇನ್ನೊಂದು ಖುಷಿ ಏನ್ ಗೊತ್ತಾ, ಪೈಯ್ಡ್ ಪ್ರೀಮಿಯರ್‌ ಶೋ ಹೌಸ್ ಫುಲ್ ಆಗಿ, ಇನ್ನೊಂದು ಶೋ ಮಾಡ್ತಿದ್ದಾರೆ.

Actually ನಾನು ಮಿಸ್ ಮಾಡ್ಕೊಳ್ತಿರೋದು, ನಿಮ್ ಬ್ರಾಡ್‌ಕಾಸ್ಟ್ ಮೆಸೇಜಸ್ನ. ನೀವಿದ್ದಿದ್ರೆ ಇಷ್ಟೊತ್ತಿಗೆ ರೇಜಿಗೆ ಹುಟ್ಸೋಷ್ಟು ಸಿನೆಮಾ ರಿಲೀಸ್ ಬಗ್ಗೆ ಮೆಸೇಜಸ್ಸು, ನ್ಯೂಸು ಅದೂ ಇದೂ ಕಳಿಸ್ತಿದ್ರಿ. ಅದರ ಬಗ್ಗೆ ಒಂದ್ಸಲ ರೇಗಿದ್ದಕ್ಕೆ ನೀವು ಹೇಳಿದ್ರಿ, ಸಾರ್ ನಿಮ್ಗೆ ಗೊತ್ತಿಲ್ಲಾ ಸುಮ್ನಿರಿ, ಅಷ್ಟು ಮೆಸೇಜ್ ಕಳ್ಸಿದ್ರು ಜನ ಬಂದು ಸಿನೆಮಾ ನೋಡೋದು ಕಡಿಮೇನೆ. ಅದಕ್ಕೆ ಅವರಿಗೆ ಪದೇ ಪದೇ ನೆನಪು ಮಾಡ್ತಾನೆ ಇರ್ಬೇಕು ಅಂತ.

ನಿಮಗೆ ಪ್ರತಿ ಸಿನೆಮಾ ಬಿಡುಗಡೆನೂ ಒಂದು ಸಂಭ್ರಮ, ಆತಂಕ ಅನ್ನೋದು ನನಗಿಂತ ಚೆನ್ನಾಗಿ ಯಾರಿಗೆ ಗೊತ್ತು ಅಲ್ವಾ? ಯಾಕೇಳಿ, ನೀವು ಪೂರ್ಣ ಪ್ರಮಾಣದ ಮುಖ್ಯ ಪಾತ್ರ ವಹಿಸಿ ನಟಿಸಿದ ‘ಹರಿವು’ ಕೊನೆಗೂ ಥಿಯೇಟರ್ ಅಲ್ಲಿ ‘ಅಧಿಕೃತವಾಗಿ’ ಬಿಡುಗಡೆ ಆಗ್ಲೇ ಇಲ್ಲಾ.

ಆದ್ರೂ

ಆ ಸಿನೆಮಾ ಎಲ್ಲೇ ಶೋ ಆಗಲಿ, ಬಿಡುವಿದ್ರೆ ನನ್ ಜೊತೆ ಬಂದ್ಬಿಡ್ತಿದ್ರಿ, ಶೋ ಮುಗಿಯೋವರೆಗೂ ಅಲ್ಲೇ ಅಕ್ಕ ಪಕ್ಕ ಓಡಾಡ್ಕೊಂಡಿದ್ದು, ಕ್ಲೈಮ್ಯಾಕ್ಸ್ ಅಲ್ಲಿ ಹಾಡು ಬರೋ ಹೊತ್ತಿಗೆ ಎಕ್ಸಿಟ್ ಬಾಗಿಲು ಹತ್ರ ಹೋಗಿ ಇಬ್ರೂ ನಿಂತ್ಕೊಂಡು ಜನಗಳ expressionನ್ನೇ ನೊಡ್ತಾ ನಿಲ್ತಿದ್ವಿ. ಆ ಅಭ್ಯಾಸ ಮೊನ್ನೆ ಆಕ್ಟ್ ಸಿನೆಮಾವರೆಗೂ ನಿಮಗೆ ಬಿಟ್ಟಿರ್ಲಿಲ್ಲಾ ಅನ್ನೋದೆ ನನಗೆ ಆಶ್ಚರ್ಯ. ಆದ್ರೆ ಫೆಬ್ರವರಿಯಲ್ಲಿ ಪಾಂಡವಪುರದಲ್ಲಿ ಹರಿವು ಪ್ರದರ್ಶನಕ್ಕೆ ಬಂದವರು ಕುತ್ಕೊಂಡು ಪೂರ್ತಿ ಸಿನೆಮಾ ನೋಡಿದ್ರಿ. ಯಾಕೋ ಹೊರಗೆ ಬರ್ಲೇ ಇಲ್ಲಾ ನೀವು. ಹ್ಮ್ ಇರ್ಲಿ ಹೇಳ್ತಾ ಹೋದ್ರೆ ತುಂಬಾನೇ ಇದೆ.

ಸಧ್ಯಕ್ಕೆ ಇಷ್ಟು ಸಾಕು.  ಉಳಿದದ್ದು ಈಗ ಬೇಡ. ನಾಳೆ ಬೆಳಗ್ಗೆ ನಿಮಗೆ ತುಂಬಾ ಇಷ್ಟವಾದ ಸಿನೆಮಾ ಬಿಡುಗಡೆ ಆಗ್ತಿದೆ. ಈ ಸಿನೆಮಾ ಶೂಟಿಂಗ್ ಟೈಮಲ್ಲಿ ತುಂಬಾನೇ ಹೇಳಿದ್ರಿ, Advaitha Gurumurthy  ಕ್ಯಾಮರಾ ವರ್ಕು, Aravind Kuplikar   ಡೈರೆಕ್ಷನ್ನು, Nagaraja Somayaji   ಡೆಡಿಕೇಷನ್ನು ಎಲ್ಲಾ ತುಂಬಾನೆ ಹೊಗಳ್ತಿದ್ರಿ. ಈಗ ಅದೆಲ್ಲಾ ನೋಡೋ ಟೈಂ ಬಂದಿದೆ. ನಾನು ಪ್ರೀಮಿಯರ್ ಶೋ ನೋಡ್ತಿಲ್ಲಾ. ಅಲ್ಲಿಗೆ ಎಲ್ಲಾ ಪರಿಚಯದವರೇ ಬಂದಿರ್ತಾರೆ. ಎಲ್ಲಾ ನಿಮ್ ಬಗ್ಗೆನೇ ಮಾತಿರುತ್ತೆ. ನಾನು ಎಮೋಷನಲಿ ಅಷ್ಟು ಸ್ಟ್ರಾಂಗ್ ಇಲ್ಲಾ, ನಿಮ್ಗೆ ಗೊತ್ತಲ್ಲಾ. ಬಟ್ ನಾಳೆ ಶುಕ್ರವಾರ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಅದು ನಾನೂ Akhila Gch  ಮತ್ತೆ ನೀವು.

ಓಕೆ ನಾ. ಸಿಟ್ಟೆಲ್ಲಾ ಮಾಡ್ಕೋಬೇಡಿ.

ಬೆಳಿಗ್ಗೆ ಸಿಗೋಣ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles