23.8 C
Bengaluru
Thursday, December 8, 2022
spot_img

ಕನ್ನಡ ಪಿಚ್ಚರ್ ಅರ್ಪಿಸುತ್ತಿದೆ ಎಸ್ ಪಿ ಬಿ ಗಾನ ನಮನ

ಸುಪ್ರಸಿದ್ಧ ಗಾಯಕ ದಿ.ಎಸ್​​​.ಪಿ.ಬಾಲಸುಬ್ರಹ್ಮಣ್ಯಂ ಅವರ ಸುಶ್ರಾವ್ಯ ಹಾಡುಗಳನ್ನು ಕೇಳಿ ಆನಂದಿಸದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಎಸ್‌ಪಿಬಿ ಕಂಠಸಿರಿಗೆ ತಲೆದೂಗಿದವರೇ. ಇವತ್ತು ದೇಶ ಕಂಡ ಶ್ರೇಷ್ಠ ಗಾಯಕ ನಮ್ಮ ಜೊತೆಗಿಲ್ಲ.ಎಸ್.ಪಿ.ಬಿ  ಭೌತ್ತಿಕವಾಗಿ ನಮ್ಮಿಂದ ದೂರವಾಗಿ ಇಂದಿಗೆ ಒಂದು ವರ್ಷವಾಗುತ್ತದೆ (25-9-2020) , ಆದ್ರೆ ಅವರು ಹಾಡಿದ ಹಾಡುಗಳೊಂದಿಗೆ ಎಂದೆಂದಿಗೂ ಜನಮಾನಸದಲ್ಲಿ  ಜೀವಂತ.

ಎಸ್.ಪಿ.ಬಿ ಅವರ ಗಾನ ಸುಧೆಯ ಪಯಣದಲ್ಲಿ 16 ಭಷೆಗಳ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಎಸ್.ಪಿ.ಬಿ.ಅವರಿಗೆ ಭಾಷೆ, ಗಡಿ ಯಾವುದೂ ಗೋಡೆಯಾಗಲಿಲ್ಲಾ ಅದೆಲ್ಲವನ್ನು ಮೀರಿ ಎತ್ತರಕ್ಕೆ ಹಾರಿ ಸಾಧನೆಯ ಶಿಖರವನ್ನೇರಿದ್ದರು. ಕರುನಾಡು, ಕನ್ನಡ, ಕರ್ನಾಟಕದ ಜನ ಎಂದರೆ ತುಸು ಹೆಚ್ಚೇ ಪ್ರೀತಿ ಹೊಂದಿದ್ದ ಎಸ್.ಪಿ.ಬಿ,  ‘ನನಗೆ ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ದೊರಕಿಲ್ಲ. ಮುಂದಿನ ಜನ್ಮವೊಂದಿದ್ದರೆ ನಾನು ಕನ್ನಡ ನಾಡಿನಲ್ಲಿ ಜನಿಸಲು ಬಯಸುತ್ತೇನೆ’ ಎಂದು ಅವರೊಮ್ಮೆ ಕರುನಾಡಿಗೆ ಮನದಾಳದಿಂದ ಕೃತಜ್ಞತೆ ಸಲ್ಲಿಸಿದ್ದರು.

ಕರುನಾಡ ಜನರೂ ಕೂಡ ಎಸ್.ಪಿ.ಬಿ ಮೇಲೆ ಅಪಾರ ಪ್ರೀತಿ ಇಟ್ಟಿದ್ದರು. ಈ ಪ್ರೀತಿ, ಅಭಿಮಾನ ಸದಾ ಕಾಪಾಡಿಕೊಳ್ಳುವುದು ಕನ್ನಡಿಗರ ನಮ್ಮ ಜವಬ್ದಾರಿಯೂ ಹೌದು. ಎಸ್.ಪಿ.ಬಿ ಅವರು ಲೌಕಿಕವಾಗಿ ನಮ್ಮಿಂದ ದೂರವಾಗಿ ಒಂದು ವರ್ಷ ಪೂರೈಸುತ್ತಿರು ಈ ಸಂದರ್ಭದಲ್ಲಿ ಅವರ ಗೌರವಾರ್ಥ ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನಲ್  ಎಸ್.ಪಿ.ಬಿ ಅವರ ನೆನಪಿಗಾಗಿ ಒಂದು ಕಾರ್ಯಕ್ರಮವನ್ನು ರೂಪಿಸಿದೆ. ಈ ಕಾರ್ಯಕ್ರಮ ಎಸ್.ಪಿ.ಬಿ ಅವರಿಗಾಗಿಯೇ ಅರ್ಪಣೆ ಮಾಡುತ್ತಿರುವುದರಿಂದ ಎಸ್.ಪಿ.ಬಿ ಗಾನ ನಮನ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಸೆಪ್ಟೆಂಬರ್ 25 ರಂದು ಬೆಳಗ್ಗೆ 9.30 ಕ್ಕೆ ಪ್ರಸಾರ ಮಾಡಲಿದೆ.

ಸಾಹಿತ್ಯ :ಸುಷ್ಮಾ ಮೋಹನ್.

ಗಾಯಕರು :ಮಹೇಶ್ ಪ್ರಿಯದರ್ಶನ್,ಶೃತಿ ಮಹೇಶ್.

ಸಂಗೀತ : ಮಹೇಶ್ ಪ್ರಿಯದರ್ಶನ್

ವಾದ್ಯ ಸಂಯೋಜನೆ :ವೆಂಕಿ D. C.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles