ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ದಾಂಪತ್ಯದ ಕುರಿತು ಬರುತ್ತಿರುವ ಗಾಸಿಪ್ ಗಳಿಂದಾಗಿ ತೀವ್ರ ನೋವು ತಂದಿದೆ ಎಂದಿದ್ದಾರೆ ತೆಲಗು ನಟ ನಾಗ ಚೈತನ್ಯ. ನಾಗ ಚೈತನ್ಯ ಹಾಗೂ ಸಮಂತಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಮಂತಾ ಮತ್ತು ನಾಗ ಚೈತನ್ಯ ಸಂಬಂದ ಮುರಿದು ಬಿದಿದ್ದು ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದ್ದವು.
ಫಿಲ್ಮ್ ಕಂಪ್ಯಾನಿಯನ್ ಸೌತ್ ವಾಹಿನಿಗೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ್ದಾರೆ. ನಾನು ನನ್ನ ಹೆತ್ತವರಿಂದ ಹಲವು ವಿಷಯಗಳನ್ನು ರೂಡಿಗತ ಮಾಡಿಕೊಂಡಿದ್ದೇನೆ, ವಯಕ್ತಿಕ ಜೀವನವನ್ನ ವಯಕ್ತಿಕವಾಗಿ, ವೃತ್ತಿಪರ ಜೀವನವನ್ನ ವೃತ್ತಿಪರವಾಗಿ ಇರಿಸಿಕೊಂಡಿದ್ದೇನೆ, ಎಂದರು.
ಸಾಮಾಜಿಕ ಮಾಧ್ಯಮಗಳ ಬಗ್ಗೆ ನಾನು ಯಾವಾಗಲು ಆಸಕ್ತಿ ಹೊಂದಿಲ್ಲಾ ಆದರೆ ಗಾಸಿಪ್ ಗಾಗಿ ನನ್ನ ಹೆಸರನ್ನು ಬಳಸಿಕೊಂಡಿರುವುದು ನೋವುತರಿಸಿದೆ ಎಂದಿದ್ದಾರೆ.
****