ಪಾತ್ರ ಯಾವುದೇ ಇರಲಿ ಪ್ರತಿ ಪಾತ್ರಕ್ಕೂ ಜೀವ ತುಂಬಿ, ನ್ಯಾಯ ಒದಗಿಸುವ ಅದ್ಭುತ ನಟ ಅಚುತ್ ಕುಮಾರ್ . ಖ್ಯಾತ ನಟ ಅಚ್ಯುತ್ ಕುಮಾರ್ ಲವರ್ ಬಾಯ್ ಆಗಿ ಮೊದಲ ಬಾರಿ ಬಣ್ಣ ಹಚ್ಚಿರುವ ಚಿತ್ರದ ಲವ್ ಸಾಂಗ್ ವೊಂದು ಇಂದು ಬಿಡುಗಡೆಯಾಗಿದೆ. ಪೋಸ್ಟರ್, ಟೀಸರ್ ಮೂಲಕ ಕ್ಯೂರಿಯಾಸಿಟಿ ಹುಟ್ಟುಹಾಕಿರುವ ‘ಪೋರ್ ವಾಲ್ಸ್’ ಚಿತ್ರ ಈಗ ಹಾಡಿನ ಮೂಲಕ ಗಮನ ಸೆಳೆಯಲು ಶುರು ಮಾಡಿದೆ.
ಸ್ಟಾರ್ ಸಿಂಗರ್ ವಿಜಯ್ ಪ್ರಕಾಶ್ ದನಿಯಾಗಿರುವ ‘ಕಣ್ಮಣಿಯೇ ಕಣ್ಮಣಿಯೇ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರದ ಬಹು ನಿರೀಕ್ಷಿತ ಸಾಂಗ್ ಕೂಡ ಇದಾಗಿದೆ. ಅಚ್ಯುತ್ ಕುಮಾರ್ ಸೈಕಲ್ ಹಿಡಿದು ಗೆಳತಿ ಹಿಂದೆ ಸುತ್ತುತ್ತ, ಪ್ರೀತಿ ನಿವೇದನೆ ಮಾಡುವ ಹಾಡು ಕೇಳುಗರಿಗೆ ಹಿತವೆನಿಸಿದೆ. ಶ್ರೀ ತಲಗೇರಿ ಸಾಹಿತ್ಯಕ್ಕೆ ಇಂಪಾದ ಸಂಗೀತ ಸಂಯೋಜನೆ ಮಾಡಿದ್ದಾರೆ ಸಂಗೀತ ನಿರ್ದೇಶಕ ಆನಂದ ರಾಜಾ ವಿಕ್ರಮ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅಪಾರ ಮೆಚ್ಚುಗೆಯೂ ಹಾಡಿಗೆ ವ್ಯಕ್ತವಾಗುತ್ತಿದೆ.
ಫೋರ್ ವಾಲ್ಸ್ ಚಿತ್ರದಲ್ಲಿ ಅಚ್ಯುತ್ ಕುಮಾರ್ಗೆ ಜೋಡಿಯಾಗಿ ಡಾ. ಪವಿತ್ರ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ಡಾ. ಜಾನ್ಹವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರ ತಾರಬಳಗವಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ ಮೂರು ಶೇಡ್ ನಲ್ಲಿ ಚಿತ್ರದಲ್ಲಿ ಕಾಣಸಿಕೊಳ್ಳಲಿದ್ದು, ತಂದೆ- ಮಗನ ನಡುವಿನ ಬಾಂದವ್ಯ ಹಾಗೂ ಮುಗ್ಧ ಪ್ರೇಮದ ಸುತ್ತ ಇಡೀ ಚಿತ್ರ ಸುತ್ತಲಿದೆ.
****