ಅರ್ಜುನ್, ರಾಗ ದಂತಹ ಉತ್ತಮ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಪಿ.ಸಿ.ಶೇಖರ್ ಈಗ ಹೊಸದೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳುಲು ಸಿದ್ದತೆ ನಡೆಸಿದ್ದಾರೆ. ತಮ್ಮ ಹೊಸ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಲಿದ್ದಾರಂತೆ. ಇತ್ತೀಚಿಗೆಷ್ಟೆ ಡಾರ್ಲಿಂಗ್ ಕೃಷ್ಣ, ನಟ ಕಡ್ಡಿಪುಡಿ ಚಂದ್ರು, ಪಿ.ಸಿ ಶೇಖರ್ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ ನಿರ್ಮಾಣಗೊಳ್ಳುತ್ತಿರುವುದಾಗಿ ಘೋಷಣೆಯಾಗಿತ್ತು. ಈ ಸಿನಿಮಾವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.
ಸಿನಿಮಾ ಚಿತ್ರೀಕರಣ ಈ ಸೆಪ್ಟೆಂಬರ್ ಕೊನೆ ವೇಳೆಗೆ ಪ್ರಾರಂಭಗೊಳ್ಳಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದೀಗ ಆಶಿಕಾ ರಂಗನಾಥ್ ಇನ್ನೂ ಹೆಸರಿಡದ ನೂತನ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ, ಮದಗಜ ಮತ್ತು ರೇಮೊ ಮೂರು ಸಿನಿಮಾಗಳು ಬಿಡುಗಡೆಗೆ ಕಾದುನಿಂತಿವೆ. ಅಲ್ಲದೆ ಮೆಡಿಕಲ್ ಥ್ರಿಲ್ಲರ್ ಸಿನಿಮಾ O2 ಸಿನಿಮಾದಲ್ಲಿಯೂ ಆಶಿಕಾ ನಟಿಸುತ್ತಿದ್ದಾರೆ. O2 ಸಿನಿಮಾವನ್ನು ರಾಘವ್ ಮತ್ತು ಪ್ರಶಾಂತ್ ರಾಜ್ ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ ತಮಿಳಿನಲ್ಲಿ ಪಾದಾರ್ಪಣೆ ಮಾಡುತ್ತಿರುವ ಆಶಿಕಾ ನಟ ಅಥರ್ವ ಅಭಿನಯದ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
****