22.9 C
Bengaluru
Sunday, March 26, 2023
spot_img

7 ವರ್ಷ, ಒಂದು ಡಜನ್ ಸಿನಿಮಾ..! ಹೊಂಬಾಳೆ ಹೆಗ್ಗಳಿಕೆ..

ಸ್ಯಾಂಡಲ್ ವುಡ್ ನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿಂದ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದ್ದು . ಹೊಂಬಾಳೆ ಫಿಲಂಸ್ ನಿಂದ ಇದೇ ಸೆಪ್ಟೆಂಬರ್ 22 ರಂದು ಮತ್ತೊಂದು ಸಿನಿಮಾ ಅನೌನ್ಸ್ ಆಗಲಿದೆ. ಸೆಪ್ಟೆಂಬರ್ 22 ರಂದು ಮಧ್ಯಾಹ್ನ 3:10ಕ್ಕೆ ಹೊಸ ಚಿತ್ರದ ಟೈಟಲ್ ಅನೌನ್ಸ್ ಮತ್ತು ಫಸ್ಟ್ ಲುಕ್  ರಿಲೀಸ್ ಮಾಡುವುದಾಗಿ ಹೊಂಬಾಳೆ ಸಂಸ್ಥೆ ತಿಳಿಸಿದೆ.

ಕಳೆದ ಮೂರು ತಿಂಗಳಲ್ಲಿ ಹೊಂಬಾಳೆ ಫಿಲಂಸ್ ನಿಂದ 4 ಸಿನಿಮಾಗಳನ್ನು ಘೋಷಣೆಯಾಗಿವೆ, ಪುನೀತ್ ರಾಜಕುಮಾರ್ ಮತ್ತು ಲೂಸಿಯ ಪವನ್ ಕುಮಾರ್ ಕಾಂಬಿನೇಷನ್ ನಲ್ಲಿ ‘ದ್ವಿತ್ವ’ ರಕ್ಷಿತ್ ಶೆಟ್ಟಿ ಯ ‘ರಿಚರ್ಡ್ ಆಂಟೋನಿ’ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರಾ’ ಮತ್ತೀಗ ಇನ್ನೊಂದು ಚಿತ್ರ ಅನೌನ್ಸ್ ಆಗುತ್ತಿದೆ. ಕೆಜಿಎಫ್ 2 ಚಿತ್ರ ನ್ನು ತೆರೆ ಕಾಣಬೇಕಿದೆ. ಒಂದು ಚಿತ್ರ ನಿರ್ಮಾಣ ಸಂಸ್ಥೆ ಇಷ್ಟು ಕಡಿಮೆ ಸಮಯದಲ್ಲಿ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಘೋಷಿಸುತ್ತಿರುವುದು ಇದೆ ಮೊದಲು ಎನ್ನಿಸುತ್ತಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles