23.8 C
Bengaluru
Thursday, December 8, 2022
spot_img

68ನೇ ವಸಂತಕ್ಕೆ ಕಾಲಿಟ್ಟ ಡೈನಾಮಿಕ್ ಸ್ಟಾರ್..!

ಸ್ಯಾಂಡಲ್​ವುಡ್​ನ ಡೈನಾಮಿಕ್ ಸ್ಟಾರ್​ ದೇವರಾಜ್ ಅವರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 68ನೇ ವಸಂತಕ್ಕೆ ಕಾಲಿಟ್ಟ ನಟ ದೇವರಾಜ್​ ಅವರು ಕುಟುಂಬದೊಂದಿಗೆ ತಮ್ಮ ಬರ್ತ್​ ಡೇ ಸೆಲಬ್ರೇಟ್​ ಮಾಡಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಕೋರುತ್ತಿದ್ದಾರೆ. ಈ ಖುಷಿಯನ್ನು ಹೆಚ್ಚಿಸಲು ದೇವರಾಜ್​ಗೆ ಈ ಬಾರಿ ಸೈಮಾ ಅವಾರ್ಡ್​ ಕೂಡ ಸಿಕ್ಕಿದೆ. ಹುಟ್ಟುಹಬ್ಬದ ಹೊಸ್ತಿಲಲ್ಲೇ ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ವಿಶೇಷ. ‘ಯಜಮಾನ’ ಸಿನಿಮಾದಲ್ಲಿನ ನಟನೆಗೆ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಸಂಭ್ರಮಕ್ಕಾಗಿ ಎಲ್ಲರಿಂದಲೂ ಅಭಿನಂದನೆ ಸಲ್ಲಿಕೆ ಆಗುತ್ತಿದೆ.

ನೂರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು ದೇವರಾಜ್​. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳಿನ ಅನೇಕ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. 1991ರಲ್ಲಿ ‘ವೀರಪ್ಪನ್’​ ಚಿತ್ರದ ನಟನೆಗಾಗಿ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 1987ರಲ್ಲಿ ‘ಆಗಂತುಕ’ ಚಿತ್ರದಲ್ಲಿನ ನಟನೆಗೆ ‘ಅತ್ಯುತ್ತಮ ಪೋಷಕ ನಟ’ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಈಗ ಅವರ ಮುಡಿಗೆ ಸೈಮಾ ಗರಿ ಸೇರ್ಪಡೆ ಆಗಿದೆ. ಅವರು ನಿಭಾಯಿಸಿದ ಪೊಲೀಸ್​ ಆಫೀಸರ್​ ಪಾತ್ರಗಳನ್ನು ಅಭಿಮಾನಿಗಳು ಎಂದಿಗೂ ಮರೆಯುವಂತಿಲ್ಲ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles