ಸಿದ್ಲಿಂಗೂ, ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಸತೀಶ್ ನೀನಾಸಂ, ಹರಿಪ್ರಿಯ ಜೋಡಿ ಅಭಿನಯದ ‘ಪೆಟ್ರೋಮ್ಯಾಕ್ಸ್’ ಚಿತ್ರ ಬಹಳ ನಿರೀಕ್ಷೆ ಮೂಡಿಸಿದೆ.
ನಿಜ ಜೀವನದಲ್ಲಿ ‘ಪೆಟ್ರೋಮ್ಯಾಕ್ಸ್’ ಎಂಬುದಕ್ಕೆ ಪ್ರತಿಯೊಬ್ಬರ ಮನಸಲ್ಲೂ ನಾನಾ ರೀತಿಯ ಕಲ್ಪನೆಗಳು ಇರುತ್ತೆ. ನಿರ್ದೇಶಕ ವಿಜಯ್ ಪ್ರಸಾದ್ ಅವರ ‘ಪೆಟ್ರೋಮ್ಯಾಕ್ಸ್’ ಟ್ರೈಲರ್ ಕೂಡ ಅಂತದ್ದೆ ಎಳೆಯನ್ನಿಟ್ಟುಕೊಂಡು ತಯಾರು ಮಾಡಿರುವ ಚಿತ್ರದಂತೆ ಕಾಣುತ್ತಿದೆ. ಸ್ನೇಹಿತರು ಬೆಳೆದು ನಂತರ ಬದುಕಿನ ದಾರಿಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಎದುರಾಗುವ ಸನ್ನಿವೇಶ, ಸವಾಲು ಮತ್ತು ಸಂಬಂಧಗಳನ್ನು ಹೇಗೆ ನಿಬಾಯಿಸುತ್ತಾರೆ ಎಂಬುದು ಪೆಟ್ರೋಮ್ಯಾಕ್ಸ್ ಟ್ರೇಲರ್ ನ ಪ್ರಮುಖ ಹೈಲೆಟ್ಸ್. ವಿಜಯ್ ಪ್ರಸಾದ್ ಸಿನಿಮಾ ಎಂದ ಕೂಡಲೆ ಅಲ್ಲಿ ಕಾಮಿಡಿ ಮತ್ತು ಡಬಲ್ ಮೀನಿಂಗ್ ಡೈಲಾಗ್ಸ್ ಇದ್ದೇ ಇರತ್ತೆ. ಪೆಟ್ರೋಮ್ಯಾಕ್ಸ್’ ನಲ್ಲಿ ಡಬಲ್ ಮೀನಿಂಗ್ ಡೈಲಾಗ್ಸ್ ಗೇನು ಕೊರತೆಯಿಲ್ಲ ಟ್ರೈಲರ್ ಕೊನೆಯಲ್ಲಿ ಅನಾಥ ಆಶ್ರಮ , ಬೆಳಕು ಅಂತೆಲ್ಲಾ ಹೇಳಿಸುವ ನಿರ್ದೇಶಕರು ಮನುಷ್ಯ ಸಂಬಂಧಗಳ ವಿವಿಧ ಆಯಾಮಗಳು ಹೇಗೆ ಬೆಸೆದುಕೊಂಡಿರುತ್ತವೆ ಎನ್ನುವುದನ್ನು ಹೇಳಲು ಹೊರಟಂತಿದೆ.
‘ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ,ಹಾಸ್ಯದ ಜೊತೆಗೆ ಇಂಟ್ರಸ್ಟಿಂಗ್ ಕಥೆಯೂ ಚಿತ್ರದಲ್ಲಿದೆ ಎನ್ನಬಹುದು ‘ಪೆಟ್ರೋಮ್ಯಾಕ್ಸ್’ಎಂದರೇನೆಂದು ತಿಳಿದುಕೊಳ್ಳಲು ಚಿತ್ರ ಬಿಡುಗಡೆ ಆಗುವವರೆಗು ಕಾಯಬೇಕಿದೆ.