ಸಾಹಸಸಿಂಹ ಡಾ ವಿಷ್ಣುವರ್ಧನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಒಟ್ಟಾಗಿ ತೆರೆಹಂಚಿಕೊಂಡಿರುವ ಸೂಪರ್ ಹಿಟ್ ಸಿನಿಮ ‘ಸಹೋದರರ ಸವಾಲ್’ ಇದೀಗ ಮತ್ತೆ ಬೆಳ್ಳಿತೆರೆಯಲ್ಲಿ ಮೂಡಿಬಂದಿದೆ. ಸೆಪ್ಟೆಂಬರ್ 18 ರಂದು ಡಾ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅವರ ಗೌರವಾರ್ಥ ಡಾ ವಿಷ್ಣುದಾದಾರ ಅಭಿಮಾನಿಗಳ ಒತ್ತಾಸೆಯಂತೆ ಸಹೋದರರ ಸವಾಲ್ ಚಿತ್ರವನ್ನು ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ಮತ್ತೆ ಬಿಡುಗಡೆ ಮಾಡಲಾಗಿದೆ.

ಅಭಿಮಾನಿಗಳ ಸಂಭ್ರಮ:
ಪ್ರಸನ್ನ ಥಿಯೇಟರ್ ಮುಂದೆ ವಿಷ್ಣುವರ್ಧನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿ ಕಟೌಟ್ ಗೆ ಬೃಹತ್ತಾದ ಹಾರ ಹಾಕಿ ಹಾಲಿನಲ್ಲಿ ಅಭಿಷೇಕ ಮಾಡಿದರು. ತಮ್ಮ ನಾಯಕ ನಟನ ಸಿನಿಮಾ ಬಿಡುಗಡೆ ಆಗುತ್ತಿರುವುದಕ್ಕೆ ಸಂಭ್ರಮಿಸಿದರು. ವಿಷ್ಣುವರ್ಧನ್, ರಜಿನಿಕಾಂತ್, ಬಾಲಕೃಷ್ಣ, ಜಯಮಾಲಿನಿ, ಲೀಲಾವತಿ, ಪದ್ಮಪ್ರಿಯ ಹೀಗೆ ಬಹುದೊಡ್ಡ ತಾರಾಬಳಗದ ಅಭಿನಯದಲ್ಲಿ 1977 ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಕೆ ಎಸ್ ಆರ್ ದಾಸ್ ನಿರ್ದೇಶನ, ಎ ಆರ್ ರಾಜು ನಿರ್ಮಾಣ, ಎಸ್ ಎಸ್ ಲಾಲ್ ಛಾಯಾಗ್ರಹಣ, ಸತ್ಯಂ ಸಂಗೀತವಿದ್ದು ಅಂದಿನ ಕಾಲಕ್ಕೆ ಗಲ್ಲ ಪಟ್ಟಿಗೆಯಲ್ಲಿ ಧೂಳ್ ಎಬ್ಬಿಸಿದ ಸಿನಿಮ ಇದಾಗಿದೆ.
