ನಟ ಪವನ್ ಶೌರ್ಯ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿವೆ. ಕೊರೊನಾ ಅಲೆಯ ನಡುವೆ ಪವನ್ ಶೌರ್ಯ ಸಿನಿಮಾಗಳಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಪವನ್ ಶೌರ್ಯ ನಟಿಸ್ತಿದ್ದಾರೆ. ಅವರ ಹುಟ್ಟುಹಬ್ಬದ ದಿನ ಚಿತ್ರತಂಡಗಳು ಪೋಸ್ಟರ್ ಹಾಗೂ ಮೋಶನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಉಡುಗೊರೆ ನೀಡಿವೆ.
ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳ್ತಿರೋ 786 ಸಿನಿಮಾದಲ್ಲಿ ಪವನ್ ನಟಿಸ್ತಿದ್ದಾರೆ. ಈ ಹಿಂದೆ ಪವನ್ ಗೂಳಿಹಟ್ಟಿ, ಉಡುಂಬ ಸೇರಿದಂತ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆಟೋಡ್ರೈವರ್ ಜೊತೆ ನಮ್ ಕಥೆ, ನಾಚಿ, ಟ್ವಿಸ್ಟರ್.. ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳಲ್ಲಿ ಪವನ್ ಬ್ಯುಸಿ.


****