31.5 C
Bengaluru
Tuesday, March 28, 2023
spot_img

53ನೇ ವಸಂತಕ್ಕೆ ಕಾಲಿಟ್ಟ ರಿಯಲ್ ಸ್ಟಾರ್ ಉಪೇಂದ್ರ

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಇಂದು ತಮ್ಮ 53ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಸಿದ್ದ ಮಾದರಿಗಳನ್ನು ತಲೆಕೆಳಗೆ ಮಾಡಿ ಒಂದು ಹೊಸ ವರ್ಷನ್ ಸೃಷ್ಠಿಸಿ ಇಡೀ ಚಿತ್ರರಂಗ ತನ್ನತ ನೋಡುವಂತೆ ಮಾಡಿದ್ದು ಇವರೇ ಅಭಿಮಾನಿಗಳ ಪ್ರೀತಿಯ ಉಪ್ಪಿ. ಕಾಶಿನಾಥ್ ಗರಡಿಯಲ್ಲಿ ಬೆಳೆದ ಉಪೇಂದ್ರ ಅವರಿಗೆ ಇಂದಿಗೂ ಕಾಶಿನಾಥ್ ಅವರೆ ಗಾಡ್ ಫಾದರ್.

1992ರಲ್ಲಿ ತೆರೆಗೆ ಬಂದ ‘ತರ್ಲೆನನ್ಮಗ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪೇಂದ್ರ ಮುಂದೆ 1993ರಲ್ಲಿ ‘ಶ್’ ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ ‘ಆಪರೇಷನ್ ಅಂತ’, ‘ಸ್ವಸ್ತಿಕ್’ ಚಿತ್ರಗಳನ್ನು ನಿರ್ದೇಶಿಸಿದರು.

1998ರಲ್ಲಿ ತೆರೆಗೆ ಬಂದ ‘ಎ’ ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮುಂದೆ ತೆರೆಗೆ ಬಂದ ‘ಉಪೇಂದ್ರ’ ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು.

ಇಲ್ಲಿಂದ ಮುಂದೆ 10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪ್ಪಿ, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ ‘ಸೂಪರ್’ ಮತ್ತು 2015ರಲ್ಲಿ ನಿರ್ದೇಶಿಸಿದ ‘ಉಪ್ಪಿ 2’ ಚಿತ್ರಗಳು ಶತದಿನ ಪೂರೈಸಿದವು. 2003ರಲ್ಲಿ ಉಪೇಂದ್ರ ಖ್ಯಾತ ನಟಿ ಪ್ರಿಯಾಂಕ ಅವರನ್ನು ಕೈಹಿಡಿದರು. 2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ.ತಮ್ಮ ವಿಶಿಷ್ಟ ಆಲೋಚನಾ ಲಹರಿಗಳು, ವಿಭಿನ್ನ ನಟನಾ ಶೈಲಿಗಳಿಂದ ಭಿನ್ನವಾಗಿ ನಿಲ್ಲುವ ಇವರು ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ

53 ನೇ ವಸಂತದ ಸಂಭ್ರಮದಲ್ಲಿರುವ ಉಪೇಂದ್ರ ಅವರಿಗೆ ಕನ್ನಡ ಪಿಚ್ಚರ್ ತಂಡ ಶುಭಾಶಯ ತಿಳಿಸುತ್ತಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles