23.8 C
Bengaluru
Thursday, December 8, 2022
spot_img

ಮೇಘನಾರಾಜ್ 2ನೇ ಮದುವೆ ಬಗ್ಗೆ ಸುಳ್ಳುಸುದ್ದಿ ಹರಡಿದ ಯೂಟ್ಯೂಬ್ ಚಾನೆಲ್ ವಿರುದ್ದ ‘ಪ್ರಥಮ್’ ಆಕ್ರೋಶ

ಎರಡನೇ ಮದುವೆ ಬಗ್ಗೆ ಮೇಘನಾ ಎಲ್ಲಿಯೂ ಮಾತನಾಡಿಲ್ಲ. ಆದರೆ ಅವರು ಹೇಳಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಕೆಲವು ಯೂಟ್ಯೂಬ್​ ಚಾನೆಲ್​ಗಳು ಸುಳ್ಳು ಮಾಹಿತಿ ಹರಡುತ್ತಿವೆ. ಜನರನ್ನು ಯಾಮಾರಿಸುವ ರೀತಿಯಲ್ಲಿ ಥಂಬ್​ ಇಮೇಜ್​ ರಚಿಸಿ, ಆ ಮೂಲಕ ಲಕ್ಷಾಂತರ ವೀವ್ಸ್​ ಪಡೆಯಲು ಹುನ್ನಾರ ನಡೆಸಲಾಗಿದೆ. ಈ ಬಗ್ಗೆ ನಟ ಪ್ರಥಮ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಾನು ನೋಡಿದ್ರೂ ನಿರ್ಲಕ್ಷ್ಯ ಮಾಡೋಣ ಅಂತಿದ್ದೆ. ಆದರೆ ಒಂದೇ ದಿನದಲ್ಲಿ 2.7 ಲಕ್ಷ ವೀವ್ಸ್​ ಆಗಿದೆ. ವೀವ್ಸ್​ ಆಗಲಿ ಮತ್ತು ದುಡ್ಡಾಗಲಿ ಎಂದು ಯೂಟ್ಯೂಬ್​ ಚಾನೆಲ್​ ಈ ಮಟ್ಟಕ್ಕೆ ಇಳಿದಾಗ ಸ್ವಲ್ಪ ಕಾನೂನಾತ್ಮಕವಾಗಿ ನೋಡಬೇಕಾಗುತ್ತದೆ. ಮೇಘನಾ ರಾಜ್ ಅವರೇ, ನೀವು ಇಂಥ ಒಂದು ಚಾನೆಲ್​ ಅನ್ನು ಕಾನೂನಾತ್ಮಕವಾಗಿ ಡಿಲಿಟ್​ ಮಾಡಿಸಿದ್ರೆ ಇನ್ನಷ್ಟು ಜನರು ಎಚ್ಚೆತ್ತುಕೊಳ್ಳುತ್ತಾರೆ' ಎಂದು ಪ್ರಥಮ್​ ಟ್ವೀಟ್​ ಮಾಡಿದ್ದಾರೆ.
ನಟಿ ಮೇಘನಾ ರಾಜ್​ ಸರ್ಜಾ ಅವರ ಬದುಕಿನಲ್ಲಿ ಹಲವು ಏರಿಳಿತಗಳಾದವು. ಪತಿ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಅವರು ಸಾಕಷ್ಟು ನೋವು ಅನುಭವಿಸಬೇಕಾಯಿತು. ಈಗ ಪುತ್ರ ರಾಯನ್​ ರಾಜ್​ ಸರ್ಜಾನ ಆರೈಕೆಯಲ್ಲಿ ಅವರು ನಗು ಕಂಡುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೋವು ನೀಡುವಂತಹ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ರಾಯನ್​ ರಾಜ್​ ಸರ್ಜಾ ನಾಮಕರಣದ ದಿನವೇ ಮೇಘನಾ ತಾಯಿ ಪ್ರಮೀಳಾ ಜೋಷಾಯ್​ ಅವರು ಕೆಲವು ಸುದ್ದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅದಕ್ಕೂ ಮೀರಿ, ಮೇಘನಾ ಎರಡನೇ ಮದುವೆ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ವಿಪರ್ಯಾಸ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles