ನಾನು ಕೋವಿಡ್ ಪಾಸಿಟೀವ್ ನಿಂದ ಬಳಲುತ್ತಿದ್ದೇನೆ ನಾನು ಬದುಕುತ್ತೇನೆ ಎಂಬ ನಂಬಿಕೆ ಇಲ್ಲ, ತುರ್ತಾಗಿ ನನಗೆ ಸಹಾಯ ಮಾಡಿ ವೀಡಿಯೋ ಶೇರ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 5 ದಿನಗಳಿಂದ ನಾನು ನರಳುತ್ತಿದ್ದೇನೆ ನನಗೆ ಎಮರ್ಜೆನ್ಸಿ ಸಹಾಯ ಬೇಕಾಗಿದೆ ನಾನು ಕೋವಿಡ್ ನಿಂದ ನರಳುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.
ದಕ್ಷಿಣ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ವಿಜಯಲಕ್ಷ್ಮಿ ಇಂದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ವಿಜಯಲಕ್ಷ್ಮಿ ಅವರು ಆರ್ಥಿಕ ತೊಂದರೆ ಅನುಭವಿಸುತ್ತಿದ್ದು ಕೊರೊನಾ ಪಾಸಿಟೀವ್ ನಿಂದ ಬಳಲುತ್ತಿದ್ದು ನಿಮೋನಿಯ ಹಂತಕ್ಕೆ ತಲುಪಿದ್ದೇನೆ ನಾನು ಜೀವಂತವಾಗಿ ಉಳಿಯುತ್ತೇನೆ ಎಂಬ ನಂಬಿಕೆ ಇಲ್ಲ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
‘’ನಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಕಲಾವಿದರ ಸಂಘದಲ್ಲಿ ನನಗೆ ಸಹಾಯ ಮಾಡುತ್ತಿಲ್ಲ. ಒಂದು ವೇಳೆ ನನಗೆ ಏನಾದರೂ ಹೆಚ್ಚು ಕಮ್ಮಿಯಾದರೆ, ಎಲ್ಲರೂ ಸೇರಿ ನನ್ನನ್ನ ಕೊಂದರು ಎಂದು ತಿಳಿದುಕೊಳ್ಳಿ’’ ಎಂದು ವಿಜಯಲಕ್ಷ್ಮಿ ಮತ್ತೊಂದು ವಿಡಿಯೋದಲ್ಲಿ ಹೇಳಿದ್ದಾರೆ.
****