ಇನ್ಸ್ಟಾಗ್ರಾಮ್ನಲ್ಲಿ ವೈಷ್ಣವಿಗೆ 10 ಲಕ್ಷ ಜನರು ಫಾಲೋ ಮಾಡ್ತಾ ಇದ್ದು, ಆ ಖುಷಿಯನ್ನು ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಹೇಳಿಕೊಂಡಿದ್ದಾರೆ ವೈಷ್ಣವಿ. 'ನನ್ನ ಕಡೆ 10 ಲಕ್ಷ ಹೃದಯಗಳು ಇವೆ ಎಂದು ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾಗಳು' ಎಂದು ಬರೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಬಂದಮೇಲೆ ವೈಷ್ಣವಿ ಜನಪ್ರಿಯತೆ ಹೆಚ್ಚಾಗಿರುವುದಕ್ಕೆ ಇದೇ ಸಾಕ್ಷಿಯಾಗಿದೆ. ಅಂದಹಾಗೆ, ಇನ್ಸ್ಟಾಗ್ರಾಮ್ನಲ್ಲಿ ಒಂದು ಮಿಲಿಯನ್ಗಿಂತಲೂ ಜಾಸ್ತಿ ಫಾಲೋವರ್ಸ್ ಹೊಂದಿರುವ ಕಿರುತೆರೆ ನಟಿಯರಲ್ಲಿ ವೈಷ್ಣವಿ 3ನೇ ಸ್ಥಾನದಲ್ಲಿದ್ದಾರೆ, ಮೊದಲೆರಡು ಸ್ಥಾನದಲ್ಲಿ ಅನುಶ್ರೀ ಮತ್ತು ದೀಪಿಕಾ ದಾಸ್ ಇದ್ದಾರೆ. ವಿಶೇಷವೆಂದರೆ, ಇವರೂ ಕೂಡ ಬಿಗ್ ಬಾಸ್ಗೆ ಹೋಗಿಬಂದ ನಟಿಯರೇ ಆಗಿದ್ದಾರೆ.
****