ಕಿಚ್ಚ ಸುದೀಪ್, ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಜ್ಯಾಕ್ ಮಂಜು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಭೇಟಿಯಾಗಿದ್ದಾರೆ. ರವಿಚಂದ್ರನ್ ರವರು ಸುದೀಪ್ ರನ್ನು ಭೇಟಿಯಾದ ಕ್ಷಣದ ಫೋಟೋ ಟ್ವೀಟ್ ಮಾಡಿದ್ದು, ಬಹಳ ದಿನಗಳ ನಂತರ ನನ್ನ ದೊಡ್ಮಗನ ಜೊತೆ ಎಂದು ಬರೆದುಕೊಂಡಿದ್ದಾರೆ.
ಮಾಣಿಕ್ಯ ಸಿನಿಮಾದಲ್ಲಿ ರವಿಚಂದ್ರನ್, ಕಿಚ್ಚ ಸುದೀಪ್ ತಂದೆ ಪಾತ್ರ ಮಾಡಿದ್ದರು. ಅದಾದ ಬಳಿಕ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿತ್ತು. ರವಿಚಂದ್ರನ್ ಸದಾ ಸುದೀಪ್ ರನ್ನು ತಮ್ಮ ದೊಡ್ಡ ಮಗ ಎಂದೇ ಹೇಳುತ್ತಿರುತ್ತಾರೆ. ಈಗ ಇಬ್ಬರ ನಡುವಿನ ಭೇಟಿಯ ಆತ್ಮೀಯ ಕ್ಷಣಗಳನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಹಂಚಿಕೊಂಡಿದ್ದಾರೆ. ಸುದೀಪ್ ಹಾಗೂ ರವಿಚಂದ್ರನ್ ಭೇಟಿಯಾಗಿದ್ದರೆಂದರೆ ಏನೋ ವಿಶೇಷ ಇದ್ದೇ ಇದೆ ಎಂದು ಇಬ್ಬರ ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ.ಇದೀಗ ಈ ಇಬ್ಬರೂ ಜೊತೆಯಾಗಿರುವುದು ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿರಬಹುದಾ ಎಂಬ ಅನುಮಾನವೂ ಕಾಣುತ್ತಿದೆ. ನಿರ್ಮಾಪಕ ಜಾಕ್ ಮಂಜು ಸಹ ಜೊತೆಗಿರುವುದರಿಂದ ಈ ಅನುಮಾನಕ್ಕೆ ಇನ್ನಷ್ಟು ಪುಷ್ಠಿಯೂ ದೊರೆತಿದೆ.