ಸ್ಯಾಂಡಲ್ ವುಡ್ ನ ಸುಂದರ ನಟಿ ಆಶಿಕಾ ರಂಗನಾಥ್ ತಮ್ಮ ಸಿನಿಮಾ ಕೇರಿಯರ್ ನಲ್ಲಿ ಇದೇ ಮೊದಲ ಬಾರಿಗೆ ಪರಭಾಷೆಯಲ್ಲಿ ನಟಿಸುವ ಮೂಲಕ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಳ್ಳಿ ಹುಡುಗಿ, ಕಬ್ಬಡ್ಡಿ ಆಟಗಾರ್ತಿಯಾಗಿ ತಮಿಳಿನ ಸ್ಟಾರ್ ನಟನೊಂದಿಗೆ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಆಶಿಕಾ ತವರಿನಲ್ಲಿ ಸಿಕ್ಕ ಅವಕಾಶಗಳನ್ನು ಬಿಡುತ್ತಿಲ್ಲ. ಹೌದು ನಟಿ ಆಶಿಕ ರಂಗನಾಥ್ ತೆಲುಗು ಚಿತ್ರದಲ್ಲಿ ನಟಿಸುವುದರ ಜೊತೆಗೆ ಸ್ಯಾಂಡಲ್ ವುಡ್ ನಲ್ಲಿಯೂ ಇದೀಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
ಕನ್ನಡದಲ್ಲಿ ಪ್ರಶಾಂತ್ ಹಾಗೂ ರಾಘವ್ ನಿರ್ದೇಶನ ಮಾಡುತ್ತಿರುವ ‘O2’ ಸಿನಿಮಾದಲ್ಲಿ ಆಶಿಕಾ ನಟಿಸಲು ಒಪ್ಪಿಕೊಂಡಿದ್ದಾರೆ ಅಲ್ಲದೆ, ಪುನೀತ್ ರಾಜಕುಮಾರ್ ಅವರ ನಿರ್ಮಾಣದಲ್ಲಿ ಮೂಡಿಬರಲಿರುವ ಸಿನಿಮಾ ಎಂಬುದು O2 ಸಿನಿಮಾದ ಮತ್ತೊಂದು ವಿಶೇಷ. ಇದೊಂದು ಮೆಡಿಕಲ್ ಥ್ರಿಲ್ಲರ್ ಸಿನಿಮಾವಂತೆ. ‘O2’ ಚಿತ್ರದಲ್ಲಿ ಆಶಿಕಾದ್ದೇ ಮುಖ್ಯ ಪಾತ್ರವಾಗಿದ್ದು ಅವರು ಡಾಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಮುಂದಿನ ಅಕ್ಟೋಬರ್ ನಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಇನ್ನಿಬ್ಬರು ಪ್ರಮುಖ ಪಾತ್ರಧಾರಿಗಳ ಆಯ್ಕೆ ಬಾಕಿಯಿದೆ ಎಂದು ಪ್ರಶಾಂತ್ ಹೇಳಿದ್ದಾರೆ.

ಇದುವರೆಗೂ ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಾ ಬಂದಿದ್ದ ಆಶಿಕಾ ಇದೇ ಮೊದಲ ಬಾರಿಗೆ ಥ್ರಿಲ್ಲರ್ ಮೂವಿ ಸಬ್ಜೆಕ್ಟ್ ಅನ್ನು ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ತನ್ನ ಪಾತ್ರದ ಕುರಿತು ಮಾತನಾಡಿರುವ ಆಶಿಕಾ ನನ್ನ ಸಿನಿ ಜರ್ನಿ ಆರಂಭವಾದಾಗಿನಿಂದ ಇಂತಹ ಕಥೆಯನ್ನೇ ಮಾಡಿರಲಿಲ್ಲ. ಈ ಚಿತ್ರದಲ್ಲಿ ನಾನು ಡಾಕ್ಟರ್. ಇದೊಂದು ಡಿಫರೆಂಟ್ ಸ್ಕ್ರಿಪ್ಟ್ ಆಗಿದ್ದು, ಇಲ್ಲಿ ವಿಭಿನ್ನವಾದ ನಟನೆಗೆ ಅವಕಾಶವಿದೆ ಮತ್ತು ನನ್ನದು ಮುಖ್ಯ ಹಾಗೂ ವಿಶಿಷ್ಟವಾದ ಪಾತ್ರ ಎಂದಷ್ಟೇ ಹೇಳುತ್ತಾರೆ. ಇನ್ನು ಅವರು O2 ಸಿನಿಮಾ ಒಪ್ಪಿಕೊಳ್ಳುವ ಮೊದಲಿಗೆ ಸಿನಿಮಾದ ಸಾರಾಂಶವನ್ನು ಓದಿದರಂತೆ, ನಂತರ ಸ್ಕ್ರಿಪ್ಟ್ ತರಿಸಿಕೊಂಡೆ. ಕತೆಯಲ್ಲಿ ತುಂಬಾ ಥ್ರಿಲ್ಲಿಂಗ್ ಇದೆ ಖುಷಿಯಾಯಿತು ಹಾಗಾಗಿ ಸಿನಿಮಾ ಒಪ್ಪಿಕೊಂಡೆ ಎನ್ನುತ್ತಾರೆ ಆಶಿಕಾ ರಂಗನಾಥ್.

ಅಕ್ಟೋಬರ್ ನಲ್ಲಿ O2 ಸಿನಿಮಾ ಸೆಟ್ಟೇರಲಿದ್ದು, ಚಿತ್ರಕ್ಕೆ ಇನ್ನಿಬ್ಬರು ಪ್ರಮುಖ ಪಾತ್ರಧಾರಿಗಳ ಆಯ್ಕೆಯಲ್ಲಿ ಚಿತ್ರತಂಡ ನಿರತವಾಗಿದೆ. ಪರಭಾಷೆಗಳಲ್ಲಿ ಅವಕಾಶ ಸಿಕ್ಕಾಗ ತವರನ್ನು ಮರೆಯುವವರ ನಡುವೆ ಆಶಿಕಾ ಎಲ್ಲೇಡೆ ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ಜಾಣತನ ತೋರಿದ್ದಾರೆ.
****