ಅಕ್ಕಿನೇನಿ ನಾಗ ಚೈತನ್ಯ ಪತ್ನಿ ಸಮಂತಾ ಕುರಿತು ಇಷ್ಟೆಲ್ಲಾ ಪುಕಾರುಗಳು ಬರುತ್ತಿದ್ದರು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಬ್ಬರಿಂದಲೂ ವ್ಯಕ್ತವಾಗಿಲ್ಲಾ. ಇಷ್ಟೆಲ್ಲಾ ಆಗುತ್ತಿದ್ದರೂ, ‘’ಇದೆಲ್ಲ ಸುಳ್ಳು’’ ಅಂತ ಕಂತೆ-ಪುರಾಣಗಳಿಗೆ ಸಮಂತಾ ಅಕ್ಕಿನೇನಿ ಆಗಲಿ ನಾಗ ಚೈತನ್ಯ ಆಗಲಿ ಫುಲ್ ಸ್ಟಾಪ್ ಇಟ್ಟಿಲ್ಲ. ಅಥವಾ ವಿಚ್ಛೇದನದ ಸುದ್ದಿ ನಿಜ ಅಂತಲೂ ಹೇಳಿಲ್ಲ. ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಮೌನಕ್ಕೆ ಶರಣಾಗಿರುವುದು ಮತ್ತಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಿರುವಾಗಲೇ, ನಟ ನಾಗ ಚೈತನ್ಯ ಒಂದು ವಾರ್ನಿಂಗ್ ಕೊಟ್ಟಿದ್ದಾರೆ. ಮೀಡಿಯಾ ಮುಂದೆ ಬರಬೇಕು ಅಂದ್ರೆ ಒಂದು ಕಂಡೀಷನ್ ಹಾಕಿದ್ದಾರೆ!

‘ಲವ್ ಸ್ಟೋರಿ’ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಮೀಡಿಯಾ ಮುಂದೆ ಭಾಗವಹಿಸಿದರೆ ಸಮಂತಾ ಮತ್ತು ವಿಚ್ಛೇದನ ಕುರಿತಾದ ಪ್ರಶ್ನೆಗಳು ಎದುರಾಗುತ್ತದೆ ಎಂಬ ಕಾರಣಕ್ಕೆ ಈ ಹಿಂದೆ ಪ್ರೊಮೋಷನಲ್ ಪ್ರೋಗ್ರಾಂಗಳಲ್ಲಿ ಭಾಗವಹಿಸುವುದಿಲ್ಲ ಅಂತ ನಾಗ ಚೈತನ್ಯ ಹೇಳಿದ್ದರಂತೆ. ಆದ್ರೀಗ, ‘ಲವ್ ಸ್ಟೋರಿ’ ಚಿತ್ರದ ಪ್ರಚಾರ ನಿಮಿತ್ತ ಸಂದರ್ಶನಗಳಲ್ಲಿ ಭಾಗವಹಿಸಲು ಒಪ್ಪಿಕೊಂಡಿರುವ ನಟ ನಾಗ ಚೈತನ್ಯ ಒಂದು ಕಂಡೀಷನ್ ಹಾಕಿದ್ದಾರಂತೆ.

ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಸಂದರ್ಶನಗಳಲ್ಲಿ ಪಾಲ್ಗೊಳ್ಳಬೇಕು ಅಂದ್ರೆ ಸಮಂತಾ ಬಗ್ಗೆ ಅಥವಾ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾಧ್ಯಮಗಳು ಯಾವುದೇ ಪ್ರಶ್ನೆ ಕೇಳಬಾರದು ಅಂತ ತಮ್ಮ ಪಿಆರ್ ತಂಡಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರಂತೆ ನಟ ನಾಗ ಚೈತನ್ಯ.ವೈಯಕ್ತಿಕ ವಿಚಾರಗಳ ಬಗ್ಗೆ ಮಾತುಕತೆ ಬೇಡ, ‘ಲವ್ ಸ್ಟೋರಿ’ ಚಿತ್ರದ ಬಗ್ಗೆ ಮಾತ್ರ ಸಂದರ್ಶನ ಇರುತ್ತದೆ ಎಂದು ಚಿತ್ರತಂಡ ಕೂಡ ಭರವಸೆ ಕೊಟ್ಟಿರುವುದರಿಂದ ಮೀಡಿಯಾ ಮುಂದೆ ಬರುವುದಕ್ಕೆ ನಟ ನಾಗ ಚೈತನ್ಯ ಒಪ್ಪಿಕೊಂಡಿದ್ದಾರಂತೆ.
****