ಚಿತ್ರರಂಗದ ನಟ ನಟಿಯರ ಪಾರ್ಟಿ ಎಂದರೆ ಹೆಚ್ಚಾಗಿ ಸ್ಟಾರ್ ಹೋಟೆಲ್ , ಪಬ್ ಗಳಲ್ಲಿ ನಡೆಯುವ ಪಾರ್ಟಿಗಳಾಗಿರುತ್ತವೆ, ಆದರೆ ಇತ್ತೀಚೆಗೆ ನಟಿ ಸುಧಾರಾಣಿ ಮನೆಯಲ್ಲಿ ಶ್ರುತಿ ಮತ್ತು ಮಾಳವಿಕ ಸೇರಿ ಮುದ್ದೆ ಊಟ ಮಾಡುವ ಮೂಲಕ ಮುದ್ದೆ ಪಾರ್ಟಿ ಮಾಡಿದ್ದಾರೆ. ಸುಧಾರಾಣಿ, ಶ್ರುತಿ ಮತ್ತು ಮಾಳವಿಕ ಒಳ್ಳೆಯ ಸ್ನೇಹಿತೆಯರು, ಇತ್ತೀಚೆಗೆ ಈ ಮೂವರು ನಟಿಯರು ಹೆಚ್ಚೆಚ್ಚು ಭೇಟಿಯಾಗುತ್ತಿದ್ದು ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಮೊನ್ನೆ ಮಧ್ಯಾಹ್ನವಷ್ಟೇ ಒಂದುಕಡೆ ಸೇರಿದ್ದ ನಟಿ ಶ್ರುತಿ, ನಟಿ ಸುಧಾರಾಣಿ ಹಾಗೂ ನಟಿ ಮಾಳವಿಕಾ ಅವಿನಾಶ್ ‘ರಾಗಿ ಮುದ್ದೆ ಪಾರ್ಟಿ’ ಮಾಡಿದ್ದಾರೆ. ಮನೆಯಲ್ಲಿ ಸ್ವತಃ ನಟಿ ಶ್ರುತಿ ರಾಗಿ ಮುದ್ದೆ ತಯಾರಿಸಿದ್ದಾರೆ. ನಟಿ ಶ್ರುತಿ ತಯಾರಿಸಿದ ರಾಗಿ ಮುದ್ದೆಯನ್ನ ಸವಿದು ಸುಧಾರಾಣಿ ಹಾಗೂ ಮಾಳವಿಕಾ ಅವಿನಾಶ್ ಖುಷಿ ಪಟ್ಟಿದ್ದಾರೆ.
ಶ್ರುತಿ ಹಾಗೂ ಮಾಳವಿಕಾ ಅವಿನಾಶ್ ಜೊತೆಗೆ ರಾಗಿ ಮುದ್ದೆ ಪಾರ್ಟಿ ಮಾಡಿದ ವಿಡಿಯೋವನ್ನು ನಟಿ ಸುಧಾರಾಣಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಶ್ರುತಿ ರಾಗಿ ಮುದ್ದೆ ತಯಾರಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ನಟಿ ಸುಧಾರಾಣಿ ಶೇರ್ ಮಾಡಿದ್ದಾರೆ.


ಇತ್ತೀಚೆಗೆ ಹಿರಿಯ ನಟಿ ಲೀಲಾವತಿ ಅವರ ಕಾಲು ಜಾರಿ ಬಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಆರೋಗ್ಯ ವಿಚಾರಿಸಲು ಲೀಲಾವತಿ ಮನೆಗೆ ಭೇಟಿ ನೀಡಿ ಅವರ ಮನೆಯಲ್ಲಿ ಇಡೀ ದಿನ ಇದ್ದು ಕಾಲಕಳೆದಿದ್ದರು. ಸುಧಾರಾಣಿ ಶ್ರುತಿ ಮತ್ತು ಮಾಳವಿಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇದ್ದು ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
****