ಸೆಪ್ಟೆಂಬರ್ 18 ರಂದು ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಈ ಸಂದರ್ಭದಲ್ಲಿ ಸೂಪರ್ ಸ್ಟಾರ್ ಉಪ್ಪಿ, ನಗರದಿಂದ ಹೊರ ಹೋಗಿ ಕುಟುಂಬದೊಂದಿಗೆ ಕಾಲ ಕಳೆಯಲು ನಿರ್ಧರಿಸಿದ್ದಾರೆ 18.09.2021 ಪ್ರತಿವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲಾ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ.ಎಂದು ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಚಿತ್ರರಂಗದ ಸೆಲೆಬ್ರೆಟಿಗಳು ಹುಟ್ಟು ಹಬ್ಬದ ದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲ್ಲು ಆಗದಿರುವುದಕ್ಕೆ ಬೇಸರ ಮಾಡಿಕೊಂಡಿದ್ದಾರೆ, ಆದರೆ ಪರಸ್ಪರ ಒಂದೆಡೆ ಸೇರಲಾಗದ ಪರಿಸ್ಥಿತಿ ಜೊತೆಗೆ ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬ ಎಂದರೆ ದೊಡ್ಡ ಹಬ್ಬ ಎಂಬಂತೆ ಸೆಲೆಬ್ರೆಟ್ ಮಾಡುವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಯಿಸುವುದರಿಂದ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ ಎನ್ನುವ ಕಾರಣದಿಂದ ಗ್ರಾಂಡ್ ಆಗಿ ಆಚರಿಸದಿರಲು ನಿರ್ಧರಿಸಿದ್ದಾರೆ.

ಉಪ್ಪಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇರುವುದರಿಂದ ಸಾರ್ವಜನಿಕವಾಗಿ ಸೆಲಬ್ರೆಟ್ ಮಾಡದೆ ತಮ್ಮ ಕುಟುಂಬದವರೊಂದಿಗೆ ಇರಲು ನಿರ್ಧರಿಸಿದ್ದಾರೆ.
ಸಿನಿಮಾ ಚಿತ್ರೀಕರಣ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸದಾ ಬ್ಯೂಸಿ ಇರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಮತ್ತೆ ಸಿನಿಮಾ ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ. ಒಟ್ಟು ಐದು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದ್ದು ಪ್ಯಾನ್ ಇಂಡಿಯಾ ಸಿನಿಮಾದ ಸಿದ್ದತೆಯಲ್ಲಿರುವ ಉಪೇಂದ್ರ ಅವರ ಹೊಸ ಚಿತ್ರದ ಟೈಟಲ್ ಯು ಆಂಡ್ ಐ( U & I) ಅಂತ ಇರಬಹುದು ಎಂದು ಸ್ಯಾಂಡಲ್ ವುಡ್ ಮಾತನಾಡಿಕೊಳ್ಳುತ್ತಿದೆ.ಉಪೇಂದ್ರ ಈ ಹಿಂದೆ ನಿರ್ದೇಶನ ಮಾಡಿದ್ದ ಸೂಪರ್ ಚಿತ್ರದ ಟೈಟಲ್ ಕೂಡ ಇದೇ ರೀತಿ ಪ್ರೇಕ್ಷಕರನ್ನು ಪನ್ಫ್ಯೂಸ್ ಮಾಡಿತ್ತು ಅದೇ ಪ್ಯಾಟ್ರನ್ ಇಲ್ಲೂ ಮುಂದುವರೆಸಿದ್ದಾರೆ ಉಪೇಂದ್ರ.
****