21.8 C
Bengaluru
Wednesday, November 30, 2022
spot_img

ಹಿರಿಯ ನಿರ್ದೇಶಕ‌ ಪಿ.ವಾಸು ರವರಿಗೆ ಹುಟ್ಟುಹಬ್ಬದ ಸಂಭ್ರಮ

ಇಂದು ಸೆಪ್ಟೆಂಬರ್ 15 ಪಿ.ವಾಸು ಅವರು ತಮ್ಮ 67 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಚಿತ್ರರಂಗದ ಬಹುದೊಡ್ಡ ನಿರ್ದೇಶಕರಾಗಿ ಹೆಸರು ಮಾಡಿರುವ ಪಿ.ವಾಸು ಅವರು ಮೂಲತಃ ಕೇರಳದವರು ತಮ್ಮ ಶಿಕ್ಷಣವನ್ನು ಕೂಡ ಕೇರಳದಲ್ಲೆ ಮಾಡಿರುವ ಪಿ.ವಾಸು ಅವರಿಗೆ ಕನ್ನಡಿಗರೆಂದರೆ ಅಚ್ಚು ಮೆಚ್ಚು. ಸಿನಿಮಾಕ್ಕೆ ಭಾಷೆಯ ಗೋಡೆಗಳಿಲ್ಲ ಎಂದು ನಂಬಿರುವ ವಾಸು ಅವರು ಕನ್ನಡ ಚಿತ್ರರಂಗಕ್ಕೆ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ವಾಸು ರವರು ಬಿ ಶ್ರೀಧರ್ ಅವರ ಜೊತೆಯಲ್ಲಿ ಸಹ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ತಮ್ಮ ಸ್ವಂತ ನಿರ್ದೇಶನದಲ್ಲಿ ಸಂತಾನ ಭಾರತಿ ಎಂಬ ಮೊದಲ ಚಿತ್ರವನ್ನು ನಿರ್ಮಿಸಿದರು. ನಂತರ ಹಲವು ಸಿನಿಮಾಗಳನ್ನು ನಿರ್ದೇಶಿಸಿದರು.ಇವರು ನಿರ್ದೇಶಿಸಿದ ಆಪ್ತ ಮಿತ್ರ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಛಾಪನ್ನೇ ಮೂಡಿಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹೀಗೆ ಹಲವಾರು ಭಾಷೆಗಳಲ್ಲಿ ಚಿತ್ರವನ್ನು ನಿರ್ಮಿಸಿ ಸೈ ಅನಿಸಿಕೊಂಡಿದ್ದಾರೆ.

ಸದ್ಯ ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ2 ಚಿತ್ರವನ್ನು ನಿರ್ದೇಶಿರುವ ಪಿ.ವಾಸು ಅವರಿಗೆ ಸಸ್ಪೆನ್ಸ್ ಥ್ರಿಲರ್ ಸಿನಿಮಾಗಳನ್ನು ವಿಭಿನವಾಗಿ ತೋರಿಸುವ ಕಲೆ ಕರಗತವಾಗಿದೆ. ಇಂದು 67 ನೇ ವಸಂತಕ್ಕೆ ಕಾಲಿಟ್ಟಿರುವ ಹಿರಿಯ ನಿರ್ದೇಶಕ ಪಿ ವಾಸು ಅವರಿಗೆ ಕನ್ನಡ ಪಿಚ್ಚರ್ ತಂಡ ಶುಭ ಹಾರೈಸುತ್ತದೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles