ದುನಿಯಾ ವಿಜಯ್ ರವರ ಚೊಚ್ಚಲನಿರ್ದೇಶನದ ಸಲಗ ಚಿತ್ರದ ಮೇಲಿನ ಕ್ರೇಜ್ ಅಕ್ಷರಶಃ ಮುಗಿಲು ಮುಟ್ಟಿದೆ.ಅಭಿಮಾನ, ನಿರೀಕ್ಷೆ ಹಾಗೂ ಭರವಸೆ ಸಿನಿ ಪ್ರಿಯರಲ್ಲಿ ಎಷ್ಟರ ಮಟ್ಟಿಗಿದೆ ಅಂದ್ರೆ, ಅವ್ರ ಮೈ ಮೇಲೆ ಸಲಗ ಟ್ಯಾಟೋ ಹಾಕಿಸಿಕೊಳ್ಳುವಷ್ಟು, ಬಹುಶಃ ಇದೆ ಮೊದಲ ಬಾರಿಗೆ ಸಿನಿಮಾವೊಂದರ ಟೈಟಲ್ ನ ಇಷ್ಟರ ಮಟ್ಟಿಗೆ ಟ್ಯಾಟೋ ಹಾಕಿಸಿಕೊಂಡಿರೋದು.ನಿಜಕ್ಕೂ ಇದೊಂದು ವಿಶಿಷ್ಠವಾದ ದಾಖಲೆ ಎನ್ನುತ್ತಿದೆ ಗಾಂಧಿನಗರ.

ಸಲಗ ಟ್ಯಾಟೋ ಹಾಕಿಸಿಕೊಂಡ ವಿಜಿ ಅಭಿಮಾನಿ


ಕನ್ನಡದ ಚಿತ್ರರಂಗದ ಮಟ್ಟಿಗೆ ಸಿನಿಮಾವೊಂದಕ್ಕೆ ಅಭಿಮಾನಿಗಳು ತೋರುತ್ತಿರುವ ಈ ರೀತಿಯ ಪ್ರೀತಿ, ಅಭಿಮಾನ ಇದೆ ಮೊದಲಿರಬೇಕು. ಸಾಮಾನ್ಯವಾಗಿ ತಮ್ಮ ನೆಚ್ಚಿನ ನಾಯಕ ನಟನ ಚಿತ್ರವನ್ನ ಅಚ್ಚೆ ಹಾಕಿಸಿಕೊಳ್ಳುವುದನ್ನು ನೋಡಿದ್ದೇವೆ ಆದರೆ ಇಷ್ಟರ ಮಟ್ಟಿಗೆ ತಮ್ಮ ನಾಯಕನ ಚಿತ್ರದ ಟೈಟಲ್ ಅನ್ನು ಟ್ಯಾಟೋ ಹಾಕಿಸಿಕೊಳ್ಳುತ್ತಿರುವುದು ನಿಜಕ್ಕೂ ದಾಖಲೆಯೆ ಸರಿ.
****